ಇತರೆ

ಅತ್ಯಾಚಾರಕ್ಕೊಳಗಾದ 10 ವರ್ಷದ ಬಾಲಕಿ ಜೀವನ್ಮರಣ ಹೋರಾಟ ನಡೆಸಿ ಸಾವು 

Views: 208

ಅಹಮದಾಬಾದ್ : ಗುಜರಾತ್‌ನ ಭರೂಚ್ ಜಿಲ್ಲೆಯ ಜಗಡಿಯಾದಲ್ಲಿ 36 ವರ್ಷದ ಕೂಲಿ ಕಾರ್ಮಿಕನ ಕಾಮಕ್ಕೆ ಬಲಿಯಾದ 10 ವರ್ಷದ ಮುಗ್ಧ ಬಾಲಕಿ ನಿರ್ಭಯಾಳಂತೆ ಸೋಮವಾರ ವಡೋದರಾದ ಎಸ್‌ಎಸ್‌ಜಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.

ಎಂಟು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಬಾಲಕಿ ಇಹಲೋಕ ತ್ಯಜಿಸಿದ್ದಾಳೆ.

ಈ ಘಟನೆಯ ನಂತರ ಹುಡುಗಿ ಎರಡು ಬಾರಿ ಹೃದಯಾಘಾತಕ್ಕೆ ಒಳಗಾಗಿದ್ದಾಳೆ.ಆಂತರಿಕ ಗಾಯಗಳಿಂದ ಬಾಲಕಿಗೆ ಎರಡು ಬಾರಿ ಹೃದಯಾಘಾತವಾಗಿದೆ ಎಂದು ವಡೋದರಾ ಆಸ್ಪತ್ರೆ ತಿಳಿಸಿದೆ.ಮುಗ್ಧ ಬಾಲಕಿಯ ಮೇಲೆ ನೆರೆಮನೆಯಾತ ಅತ್ಯಾಚಾರವೆಸಗಿದ್ದಾನೆ. ಬಾಲಕಿ ಖಾಸಗಿ ಭಾಗಗಳಿಗೆ ತೀವ್ರ ಹಾನಿ ಉಂಟಾಗಿದೆ.

ತೀವ್ರ ಗಾಯಗಳು ಮತ್ತು ಹೃದಯಾಘಾತದ ನಂತರ ಬಹು ಅಂಗಾಂಗ ವೈಫಲ್ಯದಿಂದ ಬಾಲಕಿ ನಿಧನ ಹೊಂದಿದ್ದಾಳೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಬಾಲಕಿಯ ಚಿಕಿತ್ಸೆಗೆ ಎಲ್ಲ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು.ಗುಜರಾತ್ ಸರ್ಕಾರ ಉತ್ತಮ ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದ್ದರೂ ಬಾಲಕಿಯ ಜೀವ ಉಳಿಸಲಾಗಲಿಲ್ಲ

ಭರೂಚ್‌ನಲ್ಲಿ ಬಾಲಕಿಗೆ ಚಿಕಿತ್ಸೆ ನೀಡಿದ ಡಾ.ಜೀಲ್ ಸೇಠ್ – ಬಾಲಕಿಯ ಸ್ಥಿತಿ ನೋಡಿ ಆಘಾತವಾಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಕ್ರೂರವಾಗಿ ನಡೆಸಿಕೊಳ್ಳಲಾಗಿದೆ. ಬಾಲಕಿ ಗಂಭೀರ ಗಾಯಗಳನ್ನು ನೋಡಿದಾಗ ನನಗೆ ನಿರ್ಭಯಾ ಪ್ರಕರಣ ನೆನಪಾಯಿತು ಎಂದಿದ್ದಾರೆ ಈ ಮಾತನ್ನು ಗಮನಿಸಿದರೆ ಬಾಲಕಿಯ ಜೊತೆ ಕಾಮುಕ ಮೃಗದಂತೆ ನಡೆದುಕೊಂಡಿದ್ದಾನೆ ಎಂಬುದು ಸ್ಪಷ್ಟವಾಗುತ್ತಿದೆ.ಏಳು ವರ್ಷಗಳ ತಮ್ಮ ವೃತ್ತಿ ಜೀವನದಲ್ಲಿ ಇಂತಹ ಗಂಭೀರ ಪ್ರಕರಣವನ್ನು ನೋಡಿರಲಿಲ್ಲ ಎಂದು ಹೇಳಿದ್ದಾರೆ

ಆರೋಪಿಯು ಬಾಲಕಿಯ ಮನೆಯ ಹಿಂಭಾಗದ ಕೊಠಡಿಯಲ್ಲಿ ವಾಸಿಸುತ್ತಿದ್ದ. ಆತ ಮೂಲತಃ ಜಾರ್ಖಂಡ್ ವಾಸಿ. ಪತ್ನಿ ಮತ್ತು ಪುತ್ರಿಯರು ಜಾರ್ಖಂಡ್‌ನಲ್ಲಿ ವಾಸಿಸುತ್ತಿದ್ದಾರೆ.ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Related Articles

Back to top button
error: Content is protected !!