ಅಣ್ಣ- ತಂಗಿ ಸಂಬಂಧ ಪ್ರೀತಿಗೆ ತಿರುಗಿ ಲಿವಿಂಗ್ ರಿಲೇಶಷನ್ ಶಿಪ್…! ತಂಗಿ ಸಾವಿನಲ್ಲಿ ಅಂತ್ಯ
Views: 372
ಕನ್ನಡ ಕರಾವಳಿ ಸುದ್ದಿ: ಅಣ್ಣ ತಂಗಿ ಸಂಬಂಧ ಪ್ರೀತಿಗೆ ತಿರುಗಿ ಲಿವಿಂಗ್ ರಿಲೇಶಷನ್ ಶಿಪ್ ತನಕ ಹೋಗಿದ್ದು, ಇದೀಗ ಅಣ್ಣ ತಂಗಿ ಪ್ರೀತಿ ತಂಗಿಯ ಸಾವಿನಲ್ಲಿ ಅಂತ್ಯವಾಗಿದೆ.
ಇವರು ಪರಸ್ಪರ ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳು. ಅವನಿಗೆ 30 ವರ್ಷ, ಅವಳಿಗೆ 21 ವರ್ಷ ವಯಸ್ಸು. ಆದರೂ ಅವರಿಬ್ಬರು ಅಣ್ಣ ತಂಗಿ ಪವಿತ್ರ ಸಂಬಂಧಕ್ಕೆ ವಿರುದ್ಧವಾಗಿ, ಪರಸ್ಪರ ಪ್ರೀತಿಸಿ ಅಕ್ರಮ ಸಂಬಂಧದಲ್ಲಿ ತೇಲಾಡಿದ್ದಾರೆ. ಇದನ್ನು ಕಂಡ, ಬಂಧು ಬಳಗ, ಗ್ರಾಮಸ್ಥರು ಬೈಯ್ದು ಬುದ್ದಿ ಹೇಳಿದರೂ ಕೇಳದೆ ಲಿವ್ ಇನ್ ರಿಲೇಷನ್ ಶಿಪ್‌ನಲ್ಲಿ ಇದ್ದಾರೆ, ಆದರೆ ಈಗ ಆಕೆ ಶವವಾಗಿ ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರ ಗ್ರಾಮದಲ್ಲಿ ನಡೆದಿದೆ.
ಆಕೆ ಹೆಸರು ರಾಮಲಕ್ಷ್ಮಿ (21), ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಳು. ತಂದೆ ಹೆಸರು ಆಂಜನಪ್ಪ, ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ರಾಮಕೃಷ್ಣಪುರದ ನಿವಾಸಿ. ಯುವಕನ ಹೆಸರು ಕೃಷ್ಣ (30), ತಂದೆ ಹೆಸರು ರವಣಪ್ಪ. ಇಬ್ಬರದ್ದೂ ಒಂದೇ ಊರು, ಒಂದೇ ಮನೆ. ರಾಮಲಕ್ಷ್ಮಿ ತಂದೆ ಆಂಜನಪ್ಪ ಹಾಗೂ ಕೃಷ್ಣ ತಂದೆ ರವಣಪ್ಪ ಇಬ್ಬರು ಒಂದೆ ತಾಯಿ ಮಕ್ಕಳು, ಅಣ್ಣ-ತಮ್ಮ ಮಕ್ಕಳೆ. ರಾಮಲಕ್ಷ್ಮಿ ಹಾಗೂ ಕೃಷ್ಣ, ಪಕ್ಕಾ ಅಣ್ಣ ತಂಗಿ ಸಂಬಂಧ, ಇಬ್ಬರು ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ಗಂಡ ಹೆಂಡತಿ ಅಂತ ಹೇಳಿಕೊಂಡು ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ರು. ಆದ್ರೆ ಇಂದು ರಾಮಲಕ್ಷ್ಮಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಶವ ಪತ್ತೆಯಾಗಿದೆ.






