ಜನಮನ

ಅಗಸ್ಟ್ 1 ರಿಂದ ಗ್ರಹಜ್ಯೋತಿ ಉಚಿತ ಶೂನ್ಯ ಬಿಲ್ ಜಾರಿ

Views: 0

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ರಹಜ್ಯೋತಿ ಯೋಜನೆಯಡಿ ಫಲಾನುಭವಿಗಳಿಗೆ ಜುಲೈ ತಿಂಗಳಲ್ಲಿ ಬಳಕೆ ಮಾಡಿರುವ ವಿದ್ಯುತ್ ಬಿಲ್ ಆಗಸ್ಟ್ ನಲ್ಲಿ ಬರಲಿದ್ದು,

ಕಳೆದ ವರ್ಷ ಬಳಕೆ ಮಾಡಿದ್ದ ಸರಾಸರಿ ವಿದ್ಯುತ್ ಗಿಂತ ಶೇ. 10 ರವರೆಗೆ ಹಾಗೂ 200 ಯೂನಿಟ್ ಒಳಗೆ ವಿದ್ಯುತ್ ಬಳಸಿದವರಿಗೆ ಶೂನ್ಯ ಬಿಲ್ ಸಿಗಲಿದೆ.

ಇದಕ್ಕಾಗಿ 1.16 ಕೋಟಿ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ.

ಹೀಗಾಗಿ ಆಗಸ್ಟ್ 1 ನಂತರ ರೀಡ್ ಮಾಡುವ ಬಿಲ್ ಗಳನ್ನು ಮಾತ್ರ ಪಾವತಿಸುವಂತಿಲ್ಲ ಎಂದು ಇಂಧನ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

200 ಯೂನಿಟ್ ಮೀರಿದರೆ ಸಂಪೂರ್ಣ ಶುಲ್ಕ ಪಾವತಿಸಬೇಕು. ಯೋಜನೆಯ ಫಲಾನುಭವಿಯಾಗಿದ್ದು ಯಾವುದಾದರೂ ಒಂದು ತಿಂಗಳಲ್ಲಿ ಮಾತ್ರ 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸಿದ್ದರೆ ಆ ನಿಗದಿತ ತಿಂಗಳ ಬಿಲ್ ಮಾತ್ರ ಪೂರ್ತಿ ಪಾವತಿಸಬೇಕು. ಗ್ರಹ ಜ್ಯೋತಿಯಿಂದ ಅವರನ್ನು ಅನರ್ಹಗೊಳಿಸುವುದಿಲ್ಲ, ಬದಲಿಗೆ ವಿದ್ಯುತ್ ಸಂಪರ್ಕವನ್ನೆ ಕಡಿತ ಮಾಡಲಾಗುವುದು. ಬಾಕಿ ಪಾವತಿಸಿದ ಬಳಿಕ ಈ ಯೋಜನೆಯ ಸೌಲಭ್ಯ ಹಾಗೂ ವಿದ್ಯುತ್ ಸಂಪರ್ಕ ಪಡೆಯಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Related Articles

Back to top button
error: Content is protected !!