ಇತರೆ

ಅಕ್ರಮ ಗೋಸಾಗಾಟ :ಮೂರು ಹಸುಗಳ ರಕ್ಷಣೆ: ಆರೋಪಿಗಳು ಪರಾರಿ…

Views: 0

ಕುಂದಾಪುರ: ತಾಲೂಕಿನ ಬೇಳೂರು ಗ್ರಾಮದಲ್ಲಿ ವಾಹನದಲ್ಲಿ ಅಕ್ರಮವಾಗಿ ಮೂರು ಗೋವುಗಳನ್ನು ಸಾಗಿಸುತ್ತಿರುವ ವೇಳೆ ಪತ್ತೆ ಹಚ್ಚಿ ಗೋವುಗಳನ್ನು ರಕ್ಷಿಸಲಾಗಿದೆ.

ವಾಹನ ಒಂದರಲ್ಲಿ ಅಕ್ರಮವಾಗಿ ಗೋಸಾಗಾಟ ಮಾಡುತ್ತಿರುವ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯನ್ನು ಆದರಿಸಿ ಕಾರ್ಯಾಚರಣೆ ನಡೆಸಿದ ಕೋಟ ಪೊಲೀಸರು ಮೂರು ಗೋವುಗಳನ್ನು ರಕ್ಷಿಸಿದ್ದಾರೆ.

ಹಸುಗಳನ್ನು ಏಸ್ ಗಾಡಿಯಲ್ಲಿ ಹಿಂಸಾತ್ಮಕವಾಗಿ ತುಂಬಿಸಿಕೊಂಡು ಮಧುವನ ಮಾರ್ಗವಾಗಿ ಸಾಗಿಸುತ್ತಿರುವ ವೇಳೆಯಲ್ಲಿ ಸ್ಥಳೀಯರ ಮಾಹಿತಿಯಂತೆ ಗಸ್ತಿನಲ್ಲಿದ್ದ ಎಎಸ್ಐ ಗಣೇಶ್ ಪೈ ಹಾಗೂ ಸಿಬ್ಬಂದಿಗಳು ವಾಹನವನ್ನು ಬೆನ್ನಟ್ಟಿದಾಗ ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರು ಹಸುಗಳನ್ನು ಸಾಗಿಸುತ್ತಿದ್ದ ವಾಹನವನ್ನು ವಶಪಡಿಸಿಕೊಂಡು ಕೋಟ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Articles

Back to top button
error: Content is protected !!