ಇತರೆ

ಅಂದರ್ ಬಾಹರ್ ಇಸ್ಪೀಟ್ ಆಟ ಆಡುವಾಗ ಪೊಲೀಸರ ದಾಳಿ: ತಪ್ಪಿಸಿಕೊಳ್ಳುವ ಯತ್ನದಲ್ಲಿ 7 ಮಂದಿ ನೀರುಪಾಲಾದ ಶಂಕೆ!

Views: 356

ವಿಜಯಪುರ: ಅಂದರ್ ಬಾಹರ್ ಇಸ್ಪೀಟ್ ಆಟ ಆಡುವಾಗ ಪೊಲೀಸರು ದಾಳಿ ಮಾಡಿದ್ದಾರೆ. ಆಗ ಕೃಷ್ಣಾ ನದಿಯಲ್ಲಿ ತೆಪ್ಪದ ಮೂಲಕ ಎಸ್ಕೇಪ್ ಆಗಲು ಯತ್ನಿಸಿದ ಏಳೆಂಟು ಜನರು ತೆಪ್ಪದಲ್ಲಿ ಮುಗುಚಿ ಬಿದ್ದಿರೋ ದಾರುಣ ಘಟನೆ ಕೊಲ್ಹಾರ ತಾಲೂಕಿನ ಬಳೂತಿ ಜಾಕ್ವೆಲ್ ಬಳಿ ನಡೆದಿದೆ.

ಕೃಷ್ಣಾ ನದಿಯಲ್ಲಿ ತೆಪ್ಪ ಮುಗುಚಿ ಬಿದ್ದು ಏಳೆಂಟು ಜನರು ನೀರುಪಾಲಾಗಿರುವ ಶಂಕೆ ವ್ಯಕ್ತವಾಗಿದೆ. ಅದರಲ್ಲಿ ಅದೃಷ್ಟವಶಾತ್ ಓರ್ವ ನದಿಯಿಂದ ಹೊರಗೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಮೃತ ವ್ಯಕ್ತಿಯನ್ನು ಕೋಲ್ಹಾರ ಮೂಲದ ಪುಂಡಲೀಕ ಯಂಕಂಚಿ (35) ಎಂದು ಗುರುತಿಸಲಾಗಿದೆ.

ವಿಜಯಪುರ ಜಿಲ್ಲೆಯ ಕೋಲ್ಹಾರ ತಾಲೂಕಿನ ಬಳೂತಿ ಜಾಕ್ವೆಲ್ ಬಳಿಯ ಕೃಷ್ಣಾ ನದಿಯಲ್ಲಿ ಈ ಘಟನೆ ನಡೆದಿದೆ. ತೆಪ್ಪದಲ್ಲಿ ತೆರಳಿದವರು ಕೊಲ್ಹಾರ ಹಾಗೂ ಬಳೂತಿ ಗ್ರಾಮದವರು. ಇನ್ನುಳಿದ ವ್ಯಕ್ತಿಗಳ ಬಗ್ಗೆ ಮಾಹಿತಿ ಸಿಗಬೇಕಿದೆ.

ಘಟನಾ ಸ್ಥಳಕ್ಕೆ ಗ್ರಾಮಸ್ಥರು ದೌಡಾಯಿಸಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹೆಚ್ಚುವರಿ ಎಸ್‌ಪಿ ಶಂಕರ ಮಾರಿಹಾಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Back to top button
error: Content is protected !!