ಇತರೆ

ಹೋಟೆಲ್‌ನಲ್ಲಿ ಗಿರಾಕಿಗಳಿಗೆ ಬೌ ಬೌ ಬಿರಿಯಾನಿ ನೀಡಿದ ಆರೋಪ: ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿತ!

Views: 269

ಕನ್ನಡ ಕರಾವಳಿ ಸುದ್ದಿ: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದ ಹೋಟೆಲ್‌ ಒಂದರಲ್ಲಿ ಗಿರಾಕಿಗಳಿಗೆ ನಾಯಿ ಮಾಂಸದ ಬಿರಿಯಾನಿ ನೀಡಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಜನರು ಹೋಟೆಲ್ ಗೆ ಮುತ್ತಿಗೆ ಹಾಕಿ ನಾಯಿ ಮಾಂಸ ಸಮೇತ ತೋರಿಸಿ ಮಾಲೀಕನಿಗೆ ಹಿಗ್ಗಾ ಥಳಿಸಿದ ಘಟನೆ ನಡೆದಿದೆ.

ಮಾಮೂಲಿ ಬಿರಿಯಾನಿ ರುಚಿಯಲ್ಲಾದ ವ್ಯತ್ಯಾಸದಿಂದ ಅನುಮಾನಗೊಂಡ ಸ್ಥಳೀಯರು ಹೋಟೆಲ್ ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಆಜಾದ್ ಎಂಬಾತ ತನ್ನ ಹೋಟೆಲ್‌ನಲ್ಲಿ ಬಿರಿಯಾನಿಗೆ ನಾಯಿ ಮಾಂಸ ಬೆರೆಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಮದೀನಾ ಹೋಟೆಲ್‌ನಲ್ಲಿ ಬಿರಿಯಾನಿಗೆ ನಾಯಿ ಮಾಂಸ ಬೆರಿಸಿ, ಅದನ್ನು ಗ್ರಾಹಕರಿಗೆ ಗೊತ್ತಿಲ್ಲದಂತೆ ಕೊಟ್ಟಿದ್ದಾರೆ ಎನ್ನಲಾಗಿದೆ.

ಬಿರಿಯಾನಿಗೆ ನಾಯಿ ಮಾಂಸ ಬೆರೆಸುತ್ತಿದ್ದಾರೆ ಎಂಬ ವಿಚಾರ ಗೊತ್ತಾಗುತ್ತಿದ್ದಂತೆ ಜನರು ಆಕ್ರೋಶಗೊಂಡಿದ್ದಾರೆ. ಹೋಟೆಲ್ ಮಾಲೀಕ ಆಜಾದ್‌ನನ್ನು ಹಿಡಿದು ಥಳಿಸಿದ್ದಾರೆ. ಆದರೆ ಇದು ನಾಯಿ ಮಾಂಸವಲ್ಲ ಎಂದು ಆಜಾದ್ ಹೇಳಿದ್ದಾರೆ. ಬಳಿಕ ಈ ವಿಚಾರ ತಿಳಿದು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Related Articles

Back to top button