ಹೊಂದಾಣಿಕೆ ಸಾಬೀತಾದರೆ ರಾಜಕೀಯ ನಿವೃತ್ತಿ : ಮುಖ್ಯಮಂತ್ರಿ ಸಿದ್ದರಾಮಯ್ಯ

Views: 0
ನಾನು ಯಾವತ್ತೂ ಹೊಂದಾಣಿಕೆ ರಾಜಕೀಯ ಮಾಡಲಿಲ್ಲ ಎಂದಾದರೂ ಹೊಂದಾಣಿಕೆ ರಾಜಕೀಯ ಮಾಡಿರುವುದು ಸಾಬೀತಾರೆ ರಾಜಕೀಯದಿಂದ ನಿವೃತ್ತಿ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ವಿಧಾನಸಭೆಯಲ್ಲಿ ಹೇಳಿದ್ದಾರೆ.
ನಾನು ಈ ಸದನದಲ್ಲಿ 1983 ರಿಂದ ಇದ್ದೇನೆ ನಮ್ಮ ಜೊತೆ ಸದನಕ್ಕೆ ಬಂದವರಲ್ಲಿ ಬಿ. ಆರ್. ಪಾಟೀಲ್, ದೇಶಪಾಂಡೆ ಬಿಟ್ಟು ಬೇರೆ ಯಾರು ಇರಲಿಲ್ಲ ಅಂದಿನಿಂದ ಇಲ್ಲಿಯವರೆಗೆ ಎಂದಿಗೂ ಹೊಂದಾಣಿಕೆ ರಾಜಕಾರಣ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು..
ವಿಧಾನಸಭೆಯಲ್ಲಿ ಯತ್ನಾಳ್ ಅವರು ಕಾಂಗ್ರೆಸ್ ಗ್ಯಾರಂಟಿಗಳ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದ ವೇಳೆ ಹೊಂದಾಣಿಕೆ ರಾಜಕೀಯ ಪ್ರಸ್ತಾವವಾಗಿ ಯತ್ನಾಳ್ ಮತ್ತು ಸಿಎಂ ಸಿದ್ದರಾಮಯ್ಯ ನಡುವೆ ಕೆಲಕಾಲ ವಾಕ್ ಸಮರ ನಡೆಯಿತು.
ಸದನದಲ್ಲಿ ಪ್ರತಿಪಕ್ಷ ನಾಯಕರ ಆಯ್ಕೆಗೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಬಿಜೆಪಿಯ ಹಿರಿಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ನಾನು ಪ್ರತಿಪಕ್ಷ ನಾಯಕನಾಗಬಾರದು ಎನ್ನುವ ಮಾತಿಗೆ ಮುಖ್ಯಮಂತ್ರಿ ಹೇಳಿದರು. ನೀವು ಪದೇ ಪದೆ ನಿಂತು ಮಾತಾಡಿದ್ದಕ್ಕೆ ನಿಮ್ಮನ್ನು ವಿಪಕ್ಷ ನಾಯಕನನ್ನಾಗಿ ಮಾಡೋದಿಲ್ಲ ಎಂದು ಟಾಂಗ್ ಕೊಟ್ಟರು. ನನಗೆ ಸಿಕ್ಕಿದ ಮಾಹಿತಿ ಪ್ರಕಾರ ನಿಮ್ಮನ್ನು ಪ್ರತಿಪಕ್ಷ ನಾಯಕನನ್ನಾಗಿ ಮಾಡುವುದಿಲ್ಲ ಸುಮ್ಮನೆ ಕುಳಿತುಕೊಳ್ಳಿ ಎಂದು ಸಿದ್ದು ಹೇಳಿದರು.