ಇತರೆ
ಹೆಬ್ರಿ: ಭಾರೀ ಗಾಳಿ ಮಳೆ, ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಚಾಲಕ ಸ್ಥಳದಲ್ಲಿಯೇ ಸಾವು
Views: 182
ಕನ್ನಡ ಕರಾವಳಿ ಸುದ್ದಿ: ಭಾರೀ ಗಾಳಿ ಮಳೆಯಿಂದ ಮರವೊಂದು ಕಾರಿನ ಮೇಲೆ ಬಿದ್ದ ಪರಿಣಾಮ ಕಾರು ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಹೆಬ್ರಿ ಸಮೀಪ ಶುಕ್ರವಾರ ಸಂಜೆ ವೇಳೆ ಸಂಭವಿಸಿದೆ.
ಮೃತರನ್ನು ಹೆಬ್ರಿ ಸಂತೆಕಟ್ಟೆಯ ಸದಾನಂದ ನಾಯಕ್ ಎಂದು ಗುರುತಿಸಲಾಗಿದೆ.
ಹೆಬ್ರಿಯಿಂದ ಬ್ರಹ್ಮಾವರ ಹೋಗುವ ಮಾರ್ಗದಲ್ಲಿರುವ ಹುರ್ತುಕೆ ಎಂಬಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ರಸ್ತೆ ಬದಿಯ ಮರವೊಂದು ಹಠಾತ್ ಬಿದ್ದಿದೆ. ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದ ಚಾಲಕ ಸದಾನಂದ ನಾಯಕ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ.
ಮರವನ್ನು ಕ್ರೇನ್ ಮೂಲಕ ತೆರವುಗೊಳಿಸಿ, ಮೃತದೇಹವನ್ನು ಹೊರಗಡೆ ತೆಗೆಯಲು ಹರಸಹಾಸ ಪಡಲಾಯಿತು. ಸ್ಥಳಕ್ಕೆ ಹೆಬ್ರಿ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.






