ಹೆಂಡತಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಮಾಜಿ ಸೈನಿಕ

Views: 123
ಕನ್ನಡ ಕರಾವಳಿ ಸುದ್ದಿ,:ಮಾಜಿ ಸೈನಿಕನಿಗೆ ತನ್ನ ಹೆಂಡತಿಯೇ ಕಾಡುತ್ತಿದ್ದು, ಆಕೆಯ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ತಾಲೂಕಿನ ಜನವಾಡ ಗ್ರಾಮದ ನಿವಾಸಿ ಮಾಜಿ ಸೈನಿಕ ಬಂಡೆಪ್ಪ ತಂದೆ ಶಿವಶೆಟ್ಟಿ ಬಟನಾಪುರೆ ಎಂಬುವವರು 2018ರಲ್ಲಿ ಪಕ್ಕದ ಮಮದಾಪುರ ಗ್ರಾಮದ ನಿವಾಸಿ ಭೀಮರಾವ ಧೂಳೆ ಅವರ ಕಿರಿಯ ಸುಪುತ್ರಿ ಸಂಗೀತಾಳ ಜೊತೆ ವಿವಾಹವಾಗಿದೆ. ಅವರಿಗೆ ಐದು ವರ್ಷದ ಒಂದು ಗಂಡು ಮಗು ಸಹ ಇದೆ. ಇವರಿಬ್ಬರ ದಾಂಪತ್ಯ ಜೀವನ ಕಳೆದ ಮೂರು ವರ್ಷಗಳ ಹಿಂದಷ್ಟೆ ಹಳಸಿ ಹೋಗಿದ್ದು, ಕೋರ್ಟ್ ಮೆಟ್ಟಿಲೇರಿದೆ.
ಗಂಡ ಕರ್ತವ್ಯದಲ್ಲಿದ್ದಾಗ ಹೆಂಡತಿ ಸಂಗೀತಾ ಅತ್ತೆ, ಮಾವರ ಬಳಿಯೆ ಜನವಾಡದಲ್ಲಿದ್ದರು. ಎಲ್ಲವು ಚೆನ್ನಾಗಿಯೇ ಇತ್ತು. ಇದ್ದಕ್ಕಿದ್ದಂತೆ ಅತ್ತೆ, ಮಾವನೊಂದಿಗೆ ಜಗಳ ಮಾಡಿಕೊಂಡು ಅವರಿಂದ ದೂರ ಇರುವುದಾಗಿ ಹಟ ಹಿಡಿದ ಕಾರಣ ಗಂಡ ಬಂಡೆಪ್ಪ ಅವರು ತನ್ನ ಮಗ ಹಾಗೂ ಹೆಂಡತಿಯನ್ನು ಬೀದರ್ ನಗರದ ಬಸವನಗರ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿರಿಸಿದ್ದರು. ರಜೆ ಮುಗಿಸಿ ಮತ್ತೆ ಸೈನಿಕ ಸೇವೆಗೆ ತೆರಳುವ ಸಂದರ್ಭದಲ್ಲಿ ಹೆಂಡತಿ ಸಂಗೀತಾ ತನ್ನ ಗಂಡನ ಸರ್ವಿಸ್ ಐ ಕಾರ್ಡ್ ಬಚ್ಚಟ್ಟಿದ್ದು, ತನ್ನ ಸಹೋದರನಿಗೆ ಕೊಟ್ಟಿರುತ್ತಾರೆ. ಅವರ ಸಹೋದರ ತನಗೆ ಫೋನ್ ಮಾಡಿ ಏಳು ಲಕ್ಷ ಕೊಟ್ಟರೆ ನಿಮ್ಮ ಸರ್ವಿಸ್ ಐ ಕಾರ್ಡ್ ಕೊಡುವುದಾಗಿ ಬ್ಲಾಕ್ ಮೇಲ್ ಮಾಡಿದ್ದರು. ನನ್ನ ಬಳಿ ನಿರಂತರವಾಗಿ ಹಣ ವಸುಲಿ ಮಾಡಬೇಕೆಂಬ ದುರುದ್ದೇಶದಿಂದ ನನ್ನ ಹೆಂಡತಿ ಹಾಗೂ ಆಕೆಯ ಪೋಷಕರು ನನ್ನ ವಿರೂದ್ಧ ಇಲ್ಲ ಸಲ್ಲದ ಆರೋಪ ಮಾಡಿ ಮಹಿಳಾ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದು ಸಾಲದು ಎಂಬಂತೆ ಇದರಲ್ಲಿ ನನ್ನ ತಂದೆ ಶಿವಶೆಟ್ಟಿ, ತಾಯಿ ಮಹಾದೇವಿ, ನನ್ನ ಸಹೋದರರನ್ನು ಎಳೆದು ತರಲಾಗಿದೆ. ನನ್ನ ಹೆಂಡತಿಯನ್ನು ಬೀದರ್‍ನಲ್ಲಿ ಬಾಡಿಗೆ ಮನೆಯಲ್ಲಿಟ್ಟರೂ ಉದ್ದೇಶಪೂರ್ವಕವಾಗಿ ನನ್ನ ಕುಟುಂಬದವರನ್ನು ಸಹ ಈ ಕೇಸ್‍ನಲ್ಲಿ ಎಳೆದು ತಂದಿದ್ದಾರೆ. ನನ್ನ ಹೆಂಡತಿ ಮಕ್ಕಳು ಚೆನ್ನಾಗಿರಲಿ ಎಂದು ಸೇವೆಯಿಂದ ನಿವೃತ್ತಿಯಾಗಿ ಬಂದ ಬಳಿಕ ನಾನೇ ಖುದ್ದು ನಿಂತು ಹೆರಿಗೆ ಮಾಡಿಸಿದ್ದೆ. ಆದರೆ ಸುಖಾ ಸುಮ್ಮನೆ ಗರ್ಭಪಾತ ಮಾಡಿಸಿದ್ದಾರೆ, ನನ್ನನ್ನು ಹಾಗೂ ನನ್ನ ಮಗನಿಗೆ ಮನೆಯಿಂದ ಹೊರದೂಡಿದ್ದಾರೆ ಎಂದು ಹಸಿ ಸುಳ್ಳು ಹೇಳಿ ನನ್ನ ಮೇಲೆ 498 ಸೇರಿದಂತೆ ಐದು ಕೇಸ್ ದಾಖಲಿಸಿ ನಿತ್ಯ ನನಗೆ ಹಾಗೂ ನನ್ನ ಇಡೀ ಕುಟುಂಬವನ್ನು ಕೋರ್ಟ್‍ಗೆ ಅಡ್ಡಾಡುವಂತೆ ಮಾಡಿದ್ದಾಳೆ. ಸಾಲದು ಎಂಬಂತೆ ಇತ್ತಿಚೀಗೆ ನನ್ನನ್ನು ಜೈಲಿಗೆ ತಳ್ಳುವಂಥ ಹೀನ ಕಾರ್ಯ ನನ್ನ ಹೆಂಡತಿ ಹಾಗೂ ಅವರ ಕುಟುಂಬದವರು ಮಾಡಿದ್ದಾರೆ ಎಂದು ಸ್ವತಃ ಬಂಡೆಪ್ಪ ಮಾಧ್ಯಮದವರ ಮುಂದೆ ತನ್ನ ಅಳಲು ತೋಡಿಕೊಂಡಿದ್ದಲ್ಲದೆ ಇಂಥ ಸ್ಥಿತಿ ಓರ್ವ ಶತ್ರುವಿಗೂ ಬರಬಾರದು. ಖುಷಿಯಾಗಿ ಹೆಂಡತಿ ಮಕ್ಕಳೊಂದಿಗೆ ಬದುಕುವ ನನಗೆ ನನ್ನ ಕೈ ಹಿಡಿದು ಸಪ್ತಪದಿ ತುಳಿದು ನನಗೆ ಜೈಲಿಗಟ್ಟ ಇಂಥ ಸ್ಥಿತಿ ತಂದಿರುವ ನನ್ನ ಮಡದಿ ಹಾಗೂ ಅವರ ಪೋಷಕರ ವಿರೂದ್ಧ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.