ಇತರೆ
ಹಿರಿಯಡ್ಕ: ಅನ್ನಭಾಗ್ಯದ ಅಕ್ಕಿ ದಾಸ್ತಾನು ಪತ್ತೆ: 56 ಕಿಂಟ್ವಾಲ್ ಅಕ್ಕಿ ಸಹಿತ ಆರೋಪಿಯ ಸೆರೆ

Views: 180
ಕನ್ನಡ ಕರಾವಳಿ ಸುದ್ದಿ: ಹಿರಿಯಡ್ಕದ ಬೊಮ್ಮರಬೆಟ್ಟು ಗ್ರಾಮದ ಮಾಂಬೆಟ್ಟು ಎಂಬಲ್ಲಿ ಸರಕಾರದ ಉಚಿತ ಅನ್ನ ಭಾಗ್ಯ ಯೋಜನೆಯ ಅಕ್ಕಿಯನ್ನು ಸಾರ್ವಜನಿಕರಿಂದ ಖರೀದಿಸಿ ದಾಸ್ತಾನು ಇಟ್ಟಿರುವ ಆರೋಪದಲ್ಲಿ ಓರ್ವನನ್ನು ಹಿರಿಯಡ್ಕ ಪೊಲೀಸರು ಬಂದಿಸಿದ್ದಾರೆ.
ವಾಸುದೇವ ಪ್ರಭು(56) ಬಂದಿತ ಆರೋಪಿ.
ಈತನಿಗೆ ಸೇರಿದ ಪ್ರಭು ಜನರಲ್ ಸ್ಟೋರ್ ನಲ್ಲಿ ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಸಾರ್ವಜನಿಕರಿಂದ ಖರೀದಿಸಿ ದಾಸ್ತಾನು ಇಟ್ಟಿದ್ದಾನೆ. ಈ ಬಗ್ಗೆ ಖಚಿತ ಮಾಹಿತಿಯಂತೆ ಆಹಾರ ನಿರೀಕ್ಷಕರು ಮತ್ತು ಹಿರಿಯಡ್ಕ ಪೊಲೀಸರು ದಾಳಿ ಮಾಡಿ, ಒಟ್ಟು 131 ಪ್ಲಾಸ್ಟಿಕ್ ಚೀಲಗಳಲ್ಲಿದ್ದ 1,27,880 ಮೌಲ್ಯದ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.