ಹಿಂದೂ ಧರ್ಮ ಅವಹೇಳನ ಪ್ರಕರಣ; ಶಿಕ್ಷಕಿ ವಿರುದ್ದ ಎಫ್ ಐಆರ್ ಗೆ ಪೋಷಕರ ಅಸಮಾಧಾನ

Views: 96
ಮಂಗಳೂರು: ತರಗತಿಯಲ್ಲಿ ಹಿಂದೂ ಧರ್ಮದ ಅವಹೇಳನ ಮಾಡಿದ ಮಂಗಳೂರು ನಗರದ ಶಾಲೆಯೊಂದರ ಶಿಕ್ಷಕಿಯ ವಿರುದ್ದ ಇನ್ನೂ ಕೂಡ ಎಫ್ಐಆರ್ ದಾಖಲಿಸದಿರುವ ಬಗ್ಗೆ ಪೋಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಆಯುಕ್ತ ಅನುಪಮ್ ಅಗರ್ ವಾಲ್ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪೋಷಕರು, ದೂರು ನೀಡಿ ವಾರವಾದರೂ ಎಫ್ಐಆರ್ ದಾಖಲಾಗಿಲ್ಲ. ಈ ಬಗ್ಗೆ ಕಮಿಷನರ್ ಅವರಲ್ಲಿ ಮಾತನಾಡಿದ್ದೇವೆ. ಸತ್ಯ ಏನೆಂಬ ವಿಚಾರ ಎಲ್ಲರಿಗೂ ಗೊತ್ತಿದೆ. ಶೀಘ್ರ ತನಿಖೆ ನಡೆಸಿ ಸತ್ಯವನ್ನು ಪೊಲೀಸರು ಬಹಿರಂಗ ಪಡಿಸಬೇಕು. ಶಾಸಕರು, ಹಿಂದೂ ಸಂಘಟನೆ ಮುಖಂಡರ ವಿರುದ್ದ ದಾಖಲಾಗಿರುವ ಎಫ್ಐಆರ್ ನ್ನು ರದ್ದುಗೊಳಿಸಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ಶಾಸಕ ವೇದವ್ಯಾಸ ಕಾಮತ್ ಪ್ರತಿಭಟನಾ ಸ್ಥಳದಲ್ಲಿದ್ದು ಪೋಷಕರ ಪರವಾಗಿ ಮಾತನಾಡಿದ್ದರು. ಅವರ ವಿರುದ್ದ ಎಫ್ಐಆರ್ ದಾಖಲಿಸಿರುವುದು ಸರಿಯಲ್ಲ. ಇನ್ನೋರ್ವ ಶಾಸಕ ಭರತ್ ಶೆಟ್ಟಿ, ವಿಎಚ್ ಪಿಯ ಶರಣ್ ಪಂಪ್ ವೆಲ್ ಸ್ಥಳದಲ್ಲಿರಲಿಲ್ಲ. ಅವರ ವಿರುದ್ದವೂ ಎಫ್ಐಆರ್ ದಾಖಲಿಸಲಾಗಿದೆ. ಇದು ಕೂಡ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನಂತರ ಬಿಜೆಪಿ, ವಿಎಚ್ ಪಿ ಮುಖಂಡರು ಕೂಡ ಕಮಿಷನರ್ ಅವರನ್ನು ಭೇಟಿಯಾಗಿ ಎಫ್ಐಆರ್ ನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.