ಇತರೆ

ಹಾವಿನ ಸಂತತಿಯಲ್ಲೇ ಅತ್ಯಂತ ಸುಂದರವಾದ ಹಾವು ಕಳಸದಲ್ಲಿ ಪತ್ತೆ

ಬ್ಯಾಂಬೋ ಪಿಟ್ ವೈಫರ್ ಹಾವು ಕಳಸದಲ್ಲಿ ಪತ್ತೆ.. ಹಾವಿನ ವಿಶೇಷ ಏನು?

Views: 4

ಚಿಕ್ಕಮಗಳೂರು: ಹಾವಿನ ಸಂತತಿಯಲ್ಲೇ ಅತ್ಯಂತ ಸುಂದರವಾದ ಹಾವನ್ನು ಸೆರೆ ಹಿಡಿಯಲಾಗಿದೆ.ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಇರುವ ಅಳಿವಿನಂಚಿನ ಬ್ಯಾಂಬೋ ಪಿಟ್ ವೈಫರ್ ಹಾವು ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಸೆರೆ ಸಿಕ್ಕಿದೆ.

ತಲೆ ಮೇಲೆ ಬಿದ್ದ ನೀರನ್ನ ದೇಹಕ್ಕೆ ಹೀರಿಕೊಳ್ಳುವ ಹಾವು

ಉರಗ ಸಂತತಿಯಲ್ಲೇ ತಲೆ ಮೇಲೆ ಬಿದ್ದ ನೀರನ್ನ ದೇಹಕ್ಕೆ ಹಾಗೇ ಹೀರಿಕೊಳ್ಳುವ ಏಕೈಕ ಉರಗ ಬ್ಯಾಂಬೋ ಫಿಟ್ ವೈಫರ್ ಹಾವು ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನಲ್ಲಿ ಪತ್ತೆಯಾಗಿದೆ.

ಕಳಸ ಪಟ್ಟದ ಕಳಸೇಶ್ವರ ದೇಗುಲದ ಪಕ್ಕದ ಚಂದ್ರು ಭಟ್ ಎಂಬುವರ ಮನೆಯ ಗಿಡದಲ್ಲಿದ್ದ ಈ ಅಪರೂಪದ ಹಾವನ್ನ ಉರಗ ತಜ್ಞ ರಿಜ್ವಾನ್ ಸೆರೆ ಹಿಡಿದಿದ್ದಾರೆ.

ಅಪರೂಪದ ಹಾವಿನ ತಳಿ ಅಳಿವಿನಂಚಿನ ಜೀವಿಯಾಗಿದ್ದು, ಪಶ್ಚಿಮ ಘಟ್ಟಗಳ ಅರಣ್ಯ ಪ್ರದೇಶದಲ್ಲಿ ಮಾತ್ರ ಕಾಣಸಿಗುತ್ತವೆ. ಈ ಹಾವು ಹೆಚ್ಚಾಗಿ ಬಿದಿರಿನ ಬಂಬಿನಲ್ಲಿ ವಾಸವಿರುತ್ತದೆ. ಮನೆ ಮಾಲೀಕ ಚಂದ್ರು ಭಟ್ ಮನೆ ಅಂಗಳದ ಗಿಡದ ಮೇಲಿದ್ದ ಹಾವನ್ನು ಕಂಡು ಮನೆಯುವರು ಆತಂಕದಿಂದ ಉರಗ ತಜ್ಞ ರಿಜ್ವಾನ್ ಗೆ ಫೋನ್ ಮಾಡಿದ್ದಾರೆ.

ಸ್ಥಳಕ್ಕೆ ಬಂದ ರಿಜ್ವಾನ್ ಹಾವಿನ ವಿಶೇಷತೆ ತಿಳಿಸಿ ಎಚ್ಚರಿಕೆಯಿಂದ ಹಾವನ್ನ ಸರೆ ಹಿಡಿದಿದ್ದಾರೆ. ಈ ಬ್ಯಾಂಬೋ ಫಿಟ್ ವೈಫರ್ ಉರಗ ಹಾವಿನ ಸಂತತಿಯಲ್ಲೇ ಅತ್ಯಂತ ಸುಂದರವಾದ ಹಾವಾಗಿದೆ. ಈ ಸುಂದರ ಹಾವನ್ನ ಕಂಡು ಮನೆ ಮಾಲೀಕ ಹಾಗೂ ಸ್ಥಳಿಯರು ಖುಷಿ ಪಟ್ಟಿದ್ದಾರೆ. ಹೆಚ್ಚಾಗಿ ಬಿದಿರಿನ ಬೊಂಬುಗಳಲ್ಲಿ ವಾಸವಿರುವ ಕಾರಣ ಇದಕ್ಕೆ ಬ್ಯಾಂಬೋ ಪಿಟ್ ವೈಫರ್ ಎಂದು ಕರೆಯಲಾಗುತ್ತದೆ.

Related Articles

Back to top button