ಹಾರ್ದಳ್ಳಿ ಮಂಡಳ್ಳಿ :ಕ್ರೋಶ ಸೀರೆ ಕುಚ್ಚು ತರಬೇತಿ ಸಮಾರೋಪ

Views: 60
ಕನ್ನಡ ಕರಾವಳಿ ಸುದ್ದಿ: ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಮತ್ತು ವಿಜಯ ಗ್ರಾಮೀಣ ಪ್ರತಿಷ್ಠಾನ (ರಿ.), ಮಂಗಳೂರು ಮತ್ತು ಗ್ರಾಮ ಪಂಚಾಯತ್ ಹಾರ್ದಳ್ಳಿ ಮಂಡಳ್ಳಿ, ಸಮೃದ್ಧಿ ಸಂಜೀವಿನಿ ಒಕ್ಕೂಟ ಹಾರ್ದಳ್ಳಿ ಮಂಡಳ್ಳಿ ಇವರ ಆಯೋಜನೆಯಲ್ಲಿ 6 ದಿನಗಳ ಕ್ರೋಶ ಸೀರೆ ಕುಚ್ಚು ತರಬೇತಿಯ ಸಮಾರೋಪ ಸಮಾರಂಭ ಗ್ರಾಮ ಪಂಚಾಯತ್ ಸಭಾಂಗಣ ಹಾರ್ದಳ್ಳಿ ಮಂಡಳ್ಳಿಯಲ್ಲಿ ನೆರವೇರಿತು.
ತರಬೇತಿಯಲ್ಲಿ ವಿಜಯ ಗ್ರಾಮೀಣ ಅಭಿವೃದ್ಧಿ ಸಮಿತಿ ಸದಸ್ಯರು ಸತೀಶ್ ಶೆಟ್ಟಿ ಸೈಬರ್ ಕಟ್ಟೆ, ವಿಜಯ ಗ್ರಾಮೀಣ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ರಾಜ್, ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರು ದೀಪಾ ಶೆಟ್ಟಿ, ಬಿವಿಟಿ ಮಣಿಪಾಲದ ರಾಘವೇಂದ್ರ ಆಚಾರ್ಯ ಕೆದೂರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೇಖಾ, ಬ್ಯಾಂಕ್ ಆಫ್ ಬರೋಡಾ ಹಾಲಾಡಿ ಶಾಖೆಯ ವ್ಯವಸ್ಥಾಪಕರು ಸುಬ್ರಹ್ಮಣ್ಯ, ತರಬೇತುದಾರರಾದ ನಿಶ್ಮಿತಾ ತೆಕ್ಕಟ್ಟೆ, ಸಮೃದ್ಧಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ಸುಶೀಲ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು. ರೇವತಿ, ಸರಸ್ವತಿ, ಯಶೋಧ, ನಾಗರತ್ನ, ಪಲ್ಲವಿ ತರಬೇತಿಯ ಅನಿಸಿಕೆ ಹಂಚಿಕೊಂಡರು. ಸುಜಾತ ಪ್ರಾರ್ಥಿಸಿ,ಅಶ್ವಿನಿ ಸ್ವಾಗತಿಸಿ, ಪಲ್ಲವಿ ನಿರೂಪಿಸಿದರು. ವಿಜಯ ಗ್ರಾಮೀಣ ಪ್ರತಿಷ್ಠಾನದ ಸಿಬ್ಬಂದಿ ಪಂಡರಿನಾಥ್ ಮತ್ತು ಸಂಜೀವಿನಿ ಎಲ್ ಸಿ ಆರ್ ಪಿ, ಪಶುಸಖಿ, ಸಹಕರಿಸಿದರು.ಒಟ್ಟು 30 ಮಂದಿ ಫಲಾನುಭವಿಗಳು ಉಪಸ್ಥಿತರಿದ್ದರು. ಯಶಸ್ವಿ ಮಹಿಳಾ ಸ್ವ ಉದ್ಯಮಿ ಜಯಲಕ್ಷ್ಮಿ ಅವರ ಗೋ ಅರ್ಕ ಫಿನಾಯಿಲ್ ಸ್ಟಾಲ್ ಎಲ್ಲರ ಗಮನ ಸೆಳೆಯಿತು.






