ಜನಮನ

ಸೊಸೆಯಿಂದ ಅತ್ತೆಯ ಮೇಲೆ ದೈಹಿಕ ಹಲ್ಲೆ: ವಿಡಿಯೊದಲ್ಲಿ ಸೆರೆ, ನೆಟ್ಟಿಗರಿಂದ ಆಕ್ರೋಶ

Views: 262

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋದಲ್ಲಿ ಸೊಸೆ ತನ್ನ ಅತ್ತೆಗೆ ಹಿಂಸೆ ನೀಡುತ್ತಿರುವುದು  ಸೆರೆಯಾಗಿದೆ. ಈ ಕುರಿತು ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿದೆ.

ಹಿರಿಯ ನಾಗರಿಕರ ನಿಂದನೆಯು ಆತಂಕಕಾರಿಯಾಗಿದೆ. ಅನೇಕ ಹಿರಿಯ ನಾಗರಿಕರು ತಮ್ಮ ಸ್ವಂತ ಕುಟುಂಬದವರಿಂದಲೇ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಕಾನೂನು ಜಾರಿ ಸಂಸ್ಥೆಗಳ ವೈಫಲ್ಯ ಕಾರಣವೆನ್ನಬಹುದು.

ಉತ್ತರ ಪ್ರದೇಶ ಪೊಲೀಸರಿಗೆ ಸಲ್ಲಿಸಿದ ದೂರುಗಳನ್ನು ನಿರ್ಲಕ್ಷಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಹೆಚ್ಚಿನ ದೂರುಗಳು ಸೊಸೆಯರಿಂದ ನಿಂದನೆಯ ಬಗ್ಗೆ ಒಳಗೊಂಡಿರುತ್ತದೆ. ಈ ನಿರ್ಲಕ್ಷ್ಯದಿಂದಾಗಿಯೇ ಅಲ್ಲಿ ವಯಸ್ಸಾದವರು, ದುರ್ಬಲರು ಮತ್ತೂ ಶಕ್ತಿಹೀನರಾಗುತ್ತಾರೆ. ಅವರ ಜೀವನವನ್ನು ಪೀಡಿಸುವವರಿಂದ ತಪ್ಪಿಸಿಕೊಳ್ಳಲು ಅವರಿಗೆ ಸಾಧ್ಯವೇ ಇಲ್ಲ ಎನ್ನುವಂತ ಪರಿಸ್ಥಿತಿ ಹಲವೆಡೆ ನಿರ್ಮಾಣವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ  ಈ ವಿಡಿಯೋ ಈ ಸಮಸ್ಯೆಯ ತೀವ್ರತೆಯನ್ನು ಎತ್ತಿ ತೋರಿಸುತ್ತದೆ. ಹಿರಿಯ ನಾಗರಿಕರನ್ನು ರಕ್ಷಿಸಲು ಹೆಚ್ಚು ದೃಢವಾದ ಕಾನೂನು ಪ್ರತಿಕ್ರಿಯೆಯ ತುರ್ತು ಅಗತ್ಯವನ್ನು ಇದು ಒತ್ತಿ ಹೇಳಿದೆ. ಸೊಸೆಯು ತನ್ನ ಅತ್ತೆಯ ಮೇಲೆ ದೈಹಿಕವಾಗಿ ಹಲ್ಲೆ ಮಾಡುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.

ಈ ಕುರಿತು ಕೂಡಲೇ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿದೆ. ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕರು ಸೇರಿದಂತೆ ಕಾನೂನು ಜಾರಿ ಸಂಸ್ಥೆಗಳು ಹಿರಿಯರ ನಿಂದನೆಯ ಪ್ರಕರಣಗಳನ್ನು ನಿರ್ವಹಿಸುವಲ್ಲಿ ನಿರ್ಣಾಯಕ ಕ್ರಮಗಳನ್ನು ಕೂಡಲೇ ತೆಗೆದುಕೊಳ್ಳಬೇಕಿದೆ. ಹಿರಿಯ ನಾಗರಿಕರ ಯೋಗಕ್ಷೇಮವನ್ನು ಕಾಪಾಡಲು ಇಂತಹ ಪ್ರಕರಣಗಳನ್ನು ಕೂಲಂಕುಷವಾಗಿ ತನಿಖೆ ನಡೆಸುವುದು ಮತ್ತು ಅಪರಾಧಿಗಳನ್ನು ಹೊಣೆಗಾರರನ್ನಾಗಿ ಮಾಡಿ ಶಿಕ್ಷೆಗೆ ಒಳಪಡಿಸುವುದು ಬಹುಮುಖ್ಯವಾಗಿದೆ ಎಂಬುದಾಗಿ ಅನೇಕರು ಒತ್ತಾಯ ಮಾಡಿದ್ದಾರೆ.

Related Articles

Back to top button