ಇತರೆ

ಸೇತುವೆ ಕುಸಿದು12 ಜನರ ಸಾವು: ವ್ಯಾನ್,ಕಾರು ಸೇರಿದಂತೆ ನದಿಗೆ ಬಿದ್ದ ಹಲವು ವಾಹನಗಳು 

Views: 152

ಕನ್ನಡ ಕರಾವಳಿ ಸುದ್ದಿ: ಗುಜರಾತ್ ನ ವಡೋದರಾದಲ್ಲಿ ನಡೆದ ಸೇತುವೆ ಕುಸಿತ ಪ್ರಕರಣದಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗಿದ್ದು, 12 ಜನರು ಮೃತಪಟ್ಟಿದ್ದಾರೆ.

ಸೇತುವೆ ಮೇಲೆ ವಾಹನಗಳು ಚಲಿಸುತ್ತಿದ್ದ ವೇಳೆಯೇ ಏಕಾಏಕಿ ಸೇತುವೆ ಮಧ್ಯಭಾಗ ಕುಸಿದು ಬಿದ್ದ ಪರಿಣಾಮ ವ್ಯಾನ್, ಕಾರು ಸೇರಿದಂತೆ ಹಲವಾರು ವಾಹನಗಳು ಮಹಿಸಾಗರ್ ನದಿಗೆ ಬಿದ್ದಿವೆ. ಒಂದೇ ಕುಟುಂಬದ ಮೂವರು ಸೇರಿ ಒಟ್ಟು 12 ಜನರು ಸಾವನ್ನಪ್ಪಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಗಿದ ಬಳಿಕ ಪೊಲೀಸರು ತನಿಖೆ ಕೈಗೊಳ್ಳಲಿದ್ದಾರೆ ಎಂದು ವಡೋದರಾ ಎಸ್ ಪಿ ತಿಳಿಸಿದ್ದಾರೆ.

ವಡೋದರಾ ಜಿಲ್ಲೆಯ ಪದ್ರಾ ತಾಲೂಕಿನ ಮುಜ್ ಪುರದಲ್ಲಿರುವ ಈ ಸೇತುವೆ ಮುಜ್ ಪುರ್ ನ್ನು ಆನಂದ್ ಜಿಲ್ಲೆಯ ಗಂಭೀರಾಗೆ ಹಾಗೂ ಮಧ್ಯ ಗುಜರಾತ್ ನಿಂದ ಸೌರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುತ್ತದೆ. 43 ವರ್ಷಗಳಷ್ಟು ಹಳೆಯ ಸೇತುವೆ ಇದಾಗಿದೆ.

Related Articles

Back to top button