ಧಾರ್ಮಿಕ

ಸೆ.7 ರಿಂದ 9ರವರೆಗೆ, ಬಾರಕೂರು ಶೆಟ್ಟಿಗಾರ್ ಇಂಡಸ್ಟ್ರೀಸ್ 19ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

Views: 139

ಬಾರ್ಕೂರು ರಂಗನಕೆರೆ ಶೆಟ್ಟಿಗಾರ ಇಂಡಸ್ಟ್ರೀಸ್ 19ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆಪ್ಟೆಂಬರ್ 7ರಿಂದ 9ರವರೆಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾl ಡಿ.ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ,  ವೇದಮೂರ್ತಿ ಎನ್. ರಮೇಶ್ ಭಟ್ ಪೌರೋಹಿತ್ಯದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.

ದಿನಾಂಕ 07.09.2024ನೇ ಶನಿವಾರ

ಪೂರ್ವಾಹ್ನ 10:10ಕ್ಕೆ ಶ್ರೀ ಗಣಪತಿ ವಿಗ್ರಹ ಪ್ರತಿಷ್ಠಾಪನೆ

ಮಧ್ಯಾಹ್ನ 12:30 ರಿಂದ ಮಹಾಪೂಜೆ, ಮಂಗಳಾರತಿ ಪ್ರಸಾದ ವಿತರಣೆ

ಸಂಜೆ 6:30 ರಿಂದ ರಂಗಪೂಜೆ, ಪ್ರಸಾದ ವಿತರಣೆ

ಸಾಂಸ್ಕೃತಿಕ ಕಾರ್ಯಕ್ರಮ: ರಾತ್ರಿ 7 ರಿಂದ ಗಣೇಶ್ ಭಟ್ಕಳ ಇವರ ವಿನೂತನ ನಿರೂಪಣೆಯೊಂದಿಗೆ ಎಸ್. ಬಿ. ಕೆ ಮೆಲೋಡಿಸ್ ಬಾರ್ಕೂರು ಪ್ರಸ್ತುತಪಡಿಸುವ ಭಕ್ತಿ ಸಂಗೀತ ರಸಮಂಜರಿ

ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ವಿವಿಧ ಭಜನಾ ತಂಡಗಳಿಂದ ಭಜನೆ ನಡೆಯಲಿದೆ.

ದಿನಾಂಕ 08.09.2024 ನೇ ರವಿವಾರ

ಪೂರ್ವಾಹ್ನ 9 ರಿಂದ ಗಣ ಹೋಮ, ಮಹಾಪೂಜೆ, ಮಹಾಮಂಗಳಾರತಿ,

ಮಧ್ಯಾಹ್ನ 12:30 ರಿಂದ ಪ್ರಸಾದ ವಿತರಣೆ

ಸಂಜೆ 4 ರಿಂದ ಭಜನೆ

ಸಂಜೆ 6:30 ರಿಂದ ರಂಗ ಪೂಜೆ

ಸಂಜೆ 7 ರಿಂದ ಬಿ .ಕಾಳಿಂಗರಾವ್ ಸ್ಮೃತಿ ಮೆಲೋಡಿಯಸ್ ಬಾರಕೂರು ರಾಜೇಶ್ ಶಾನುಬೋಗ ಹಾಗೂ ತಂಡದವರಿಂದ ಸಂಗೀತ ಕಾರ್ಯಕ್ರಮ

ರಾತ್ರಿ 8:30 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ

ಅಧ್ಯಕ್ಷರು: ಶ್ರೀ ಬಿ. ರಮೇಶ ಆಚಾರ್ಯ ಬಾರ್ಕೂರು

ಉದ್ಘಾಟನೆ: ಶ್ರೀ ರಾಜಾರಾಮ್ ಶೆಟ್ಟಿ ಹೋಟೆಲ್ ಆಶ್ರಯ ಬ್ರಹ್ಮಾವರ, ಸಂಚಾಲಕರು ಎಸ್. ವಿ.ವಿ. ಎನ್‌.ಇ.ಎಂ ಸ್ಕೂಲ್ ಹೆರಾಡಿ ಬಾರ್ಕೂರು

ಅತಿಥಿಗಳು

ಶ್ರೀ ಬಿ ಶಾಂತರಾಮ್ ಶೆಟ್ಟಿ ಅಧ್ಯಕ್ಷರು ಜೀರ್ಣೋದ್ಧಾರ ಸಮಿತಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಬಾರ್ಕೂರು.

ಶ್ರೀ ಪುರುಷೋತ್ತಮ್ ಶೆಟ್ಟಿಗಾರ್ ನಿವ್ರತ್ತ ಉಪನ್ಯಾಸಕರು ಎಕ್ಸೆಲ್ ಪಿಯು ಕಾಲೇಜ್ ಗುರುವಾಯನಕೆರೆ ಬೆಳ್ತಂಗಡಿ

ಶ್ರೀ ಸಿ.ಎ ಗಣೇಶ್ ಬಿ ಕಾಂಚನ್ ಬಾರ್ಕೂರು 

ಶ್ರೀಮತಿ ಮಲ್ಲಿಕಾ ಪೂಜಾರಿ ಅಧ್ಯಕ್ಷರು ಗ್ರಾಮ ಪಂಚಾಯತ್ ಹನೇಹಳ್ಳಿ

ಶ್ರೀ ನಾರಾಯಣ ಮೂರ್ತಿ ವಿಷ್ಣು ಡೆವಲಪರ್ಸ್ ಬೆಂಗಳೂರು

ಶ್ರೀ ಸಂತೋಷ್ ಶೆಟ್ಟಿ ನಲಕ್ಕುದ್ರು ಮಾಲಕರು ಭಾರತ ಹ್ಯೂಮ್ ಪೈಪ್ಸ್ ಜಪ್ತಿ

ಶ್ರೀ ಸತೀಶ್ ಪೂಜಾರಿ ಮಾಲಕರು ಗ್ಲೋಬಲ್ ಕ್ವಾಯರ್ ಇಂಡಸ್ಟ್ರೀಸ್ ಬೆಣ್ಣೆಕುದ್ರು ಬಾರ್ಕೂರು

ಶ್ರೀ ಜಯರಾಮ್ ಪೂಜಾರಿ, ಬಂಡಿಮಠ ಮಾಲಕರು ಸ್ವಾದಿಷ್ಟ ಗ್ರೂಪ್ ಆಫ್ ಹೋಟೆಲ್ಸ್

ಶ್ರೀ ಸಂದೀಪ್ ಬಿ ಪೂಜಾರಿ, ನಡೂರು ದೇವಾಲಯಗಳ ಗುತ್ತಿಗೆದಾರರು ನಡೂರು ಅಸೋಸಿಯೇಟ್ಸ್

ಶ್ರೀಮತಿ ಗೀತಾ ಆನಂದ್ ಶೆಟ್ಟಿ ಶಿಕ್ಷಕರು ಸರಕಾರಿ ಪ್ರೌಢಶಾಲೆ ವಡ್ಡರ್ಸೆ 

ಶ್ರೀ ಗಿರೀಶ್ ಕುಮಾರ್ ಸಹಾಯಕ ಪೊಲೀಸ್ ಉಪನಿರೀಕ್ಷಕರು ಉಡುಪಿ

ಶ್ರೀಮತಿ ಪಲ್ಲವಿ ರಾಜ್ ಪ್ರಾಥಮಿಕ ಆರೋಗ್ಯ ಕೇಂದ್ರ ಬಾರ್ಕೂರು

ಉದ್ಯಮ ಮತ್ತು ಕ್ರೀ ಕ್ರೀಡಾ ಕ್ಷೇತ್ರದ ಸಾಧಕರಿಗೆ ಅಭಿನಂದನೆ, ಪ್ರತಿಭಾ ಪುರಸ್ಕಾರ ಹಾಗೂ ಸಹಾಯಧನ ವಿತರಣೆ

ರಾತ್ರಿ 9:30ರಿಂದ ನಾಟಕ “ಶಿವದೂತೆ ಗುಳಿಗೆ”

ದಿನಾಂಕ 09.09.2024ನೇ ಸೋಮವಾರ

ಪೂರ್ವಾಹ್ನ 9 ರಿಂದ ಗಣಹೋಮ, ಮಹಾಪೂಜೆ ಮಹಾಮಂಗಳಾರತಿ

ಮಧ್ಯಾಹ್ನ 12 ರಿಂದ ಪ್ರಸಾದ ವಿತರಣೆ

ಮಧ್ಯಾಹ್ನ 12:30 ರಿಂದ ಮಹಾ ಅನ್ನಸಂತರ್ಪಣೆ

ಅಪರಾಹ್ನ 3:30ರಿಂದ ಗಣಪತಿ ವಿಸರ್ಜನಾ ಪೂಜೆ, ಮಂಗಳಾರತಿ ಪ್ರಸಾದ ವಿತರಣೆ, ವಿಸರ್ಜನಾ ಮೆರವಣಿಗೆ, ಜಲ ಸ್ತಂಭನ

ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆ

ಶೆಟ್ಟಿಗಾರ್ ಇಂಡಸ್ಟ್ರೀಸ್ ನಿಂದ ಅಲಂಕೃತವಾದ ವಾಹನಗಳ ಮೂಲಕ ಬಾರ್ಕೂರು ಶ್ರೀ ಬಟ್ಟೆ ವಿನಾಯಕ ದೇವಸ್ಥಾನಕ್ಕೆ ತೆರಳಿ, ಅಲ್ಲಿಂದ 4 ಗಂಟೆಗೆ ಪುರ ಮೆರವಣಿಗೆ ಹೊರಟು ರಂಗನ ಕೇರಿಯ ಶ್ರೀ ಸತ್ಯ ಗರ್ಭಗಣಪತಿ ದೇವಾಲಯದ ಕೆರೆಯಲ್ಲಿ ವಿಸರ್ಜಿಸಲಾಗುವುದು.

ಕೀಲು ಕುದುರೆ, ತಟ್ಟಿರಾಯ, ಮೋಜು ಮೋಜಿನ ಗೊಂಬೆ ಕುಣಿತ, ಚಂಡೆವಾದನ,  ಹುಲಿ ವೇಷ ಕುಣಿತ, ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ ಎಂದು ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಅವರು  ಸರ್ವರನ್ನು ಆಮಂತ್ರಿಸಿ, ತನು -ಮನ- ಧನ ಸಹಾಯವನ್ನಿತ್ತು ಪ್ರೋತ್ಸಾಹಿಸಿ, ಶ್ರೀ ಮಹಾಗಣಪತಿಯ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕೆಂದು ವಿನಂತಿಸಿದರು.

Related Articles

Back to top button