ಸುರತ್ಕಲ್ MRPL ದುರಂತ ಸಾವು ಪ್ರಕರಣ:ಗರಿಷ್ಠ ಪರಿಹಾರಕ್ಕಾಗಿ ಇಂದು ಪ್ರತಿಭಟನೆ

Views: 79
ಕನ್ನಡ ಕರಾವಳಿ ಸುದ್ದಿ: ಸುರತ್ಕಲ್ ಎಂಆರ್ ಪಿಎಲ್ ಸ್ಥಾವರದಲ್ಲಿ ಶನಿವಾರ ಸಂಭವಿಸಿದ ದುರಂತದಲ್ಲಿಪ್ರಯಾಗ್‌ರಾಜ್‌ನ ದೀಪ್ ಚಂದ್ರ (33) ಮತ್ತು ಕೇರಳದ ಬಿಜಿಲ್ ಪ್ರಸಾದ್ (33) ಮೃತಪಟ್ಟ ಕಾರ್ಮಿಕರು.
ಇವರನ್ನು ರಕ್ಷಿಸಲು ಯತ್ನಿಸಿದ ಗದುಗಿನ ವಿನಾಯಕ ಅಸ್ವಸ್ಥಗೊಂಡಿದ್ದರು. ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದಾರೆ. ಮೃತಪಟ್ಟಿರುವ ಕಾರ್ಮಿಕ ದೀಪ್ ಚಂದ್ರ ಬಾರ್ತಿಯ ಅವರ ಪತ್ನಿ ನೀಡಿದ ದೂರಿನ ಮೇರೆಗೆ ಎಂಆರ್‌ಪಿಎಲ್ 6 ಮಂದಿ ಅಧಿಕಾರಿಗಳ ವಿರುದ್ಧ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅನಿಲ ಸೋರಿಕೆ ಕುರಿತಂತೆ ಪರಿಶೀಲಿಸಲು ತೆರಳಿದ್ದಾಗ ದೀಪ್ ಚಂದ್ರ ಬಾರ್ತಿಯ ಹಾಗೂ ಇಜಿಲ್ ಪ್ರಸಾದ್ ಗ್ಯಾಸ್ ಸೋರಿಕೆಯಿಂದಾಗಿ ಉಸಿರುಗಟ್ಟಿ ಮೃತಪಟ್ಟಿದ್ದರು.ದುರಂತ ನಡೆದ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಸಂತೋಷ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುರತ್ಕಲ್ ಉಪತಹಶೀಲ್ದಾರರು ಸ್ಥಳಕ್ಕೆ ಭೇಟಿನೀಡಿ ಮಾಹಿತಿ ಕಲೆಹಾಕಿದ್ದು ಜಿಲ್ಲಾಧಿಕಾರಿಗಳಿಗೆ ಪ್ರಥಮ ಮಾಹಿತಿ ನೀಡಿದ್ದಾರೆ.
ಮೃತ ಕಾರ್ಮಿಕ ದೀಪ್ ಚಂದ್ರ ಬಾರ್ತಿಯ ಅವರ ಮೃತದೇಹವನ್ನು ಅವರ ಊರಾದ ಉತ್ತರಪ್ರದೇಶದ ಪ್ರಯಾಗ್‌ರಾಜ್ ಗೆ ತೆಗೆದುಕೊಂಡು ಹೋದ ಸಹೋದ್ಯೋಗಿಗಳಿಗೆ ಮೃತನ ಸಂಬಂಧಿಕರು ದಿಗ್ವಂಧನ ವಿಧಿಸಿದ್ದಾರೆ. ಸಾವಿಗೆ ಸಂಬಂಧಪಟ್ಟಂತೆ ಎಂಆರ್ ಪಿಎಲ್ ಹಿರಿಯ ಅಧಿಕಾರಿಗಳು ಮಾಹಿತಿ ನೀಡಬೇಕು. ಪರಿಹಾರದ ಬೇಡಿಕೆಯನ್ನು ಈಡೇರಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ
ಬಳಿಕ MRPL ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚಿಸಿದ್ದು, ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಸೂಚಿಸಿದ್ದಾರೆ. ಮೃತ ವ್ಯಕ್ತಿಗಳ ಕುಟುಂಬಕ್ಕೆ ಗರಿಷ್ಠ ಪರಿಹಾರ ನೀಡಲು ಮತ್ತು ಸುರಕ್ಷತಾ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದರು.
ಇಂದು ಪ್ರತಿಭಟನೆ
ಮೃತಪಟ್ಟ ನೌಕರರ ಕುಟುಂಬಗಳಿಗೆ ಕಂಪೆನಿ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕಂಪೆನಿಯ ನೌಕರರ ಸಂಘಟನೆ ಸೋಮವಾರ ಬೆಳಗ್ಗೆ 9 ಗಂಟೆಗೆ ಎಂಆರ್‌ಪಿಎಲ್ ಕಾರ್ಗೊ ಗೇಟ್ ಮುಂಭಾಗ ಪ್ರತಿಭಟನೆ ನಡೆಸಲಿದೆ.






