ಇತರೆ
ಸಿದ್ದಾಪುರ: ರಸ್ತೆ ದಾಟುವಾಗ ವೇಗವಾಗಿ ಬಂದ ಕಾರು ಡಿಕ್ಕಿ, ಪಾದಚಾರಿ ಸಾವು

Views: 119
ಸಿದ್ದಾಪುರ: ಬೈಂದೂರು ವಿರಾಜಪೇಟೆ ರಾಜ್ಯ ಹೆದ್ದಾರಿಯ ಹೈಕಾಡಿ ಹೊಗೆಬೇಳಾರ್ ಮುಡುವಳ್ಳಿ ಕ್ರಾಸ್ ಬಳಿ ವ್ಯಕ್ತಿಯೊಬ್ಬರು ರಸ್ತೆ ದಾಟುವಾಗ ಹೈಕಾಡಿಯಿಂದ ಹಾಲಾಡಿ ಕಡೆಗೆ ಅತೀ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ತಟ್ಟುವಟ್ಟು ಮೇಲ್ಮನೆಯ ಸುರೇಂದ್ರ ನಾಯ್ಕ ಯಾನೆ ಸುರೇಶ ನಾಯ್ಕ (38)ಅಪಘಾತಕ್ಕೆ ತಲೆಗೆ ತೀವ್ರ ಪೆಟ್ಟಾಗಿದೆ. ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತರು ಕೃಷಿ ಕೂಲಿ ಕಾರ್ಮಿಕರಾಗಿದ್ದು, ಕೆಲಸ ಮುಗಿಸಿ ವಾಪಸು ಬರುವಾಗ ಅಪಘಾತ ನಡೆದಿದೆ. ಪತ್ನಿ ,ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ.
ಘಟನೆಯ ಕುರಿತು ಶಂಕರನಾರಾಯಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.