ಸಾಸ್ತಾನ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡುತ್ತಿರುವ ಕುದುರೆಗಳಿಗೆ ಬೆಚ್ಚಿಬಿದ್ದ ವಾಹನ ಸವಾರರು..!

Views: 241
ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂರು ಕುದುರೆಗಳು ಓಡಾಟದ ವೀಡಿಯೋ ವೈರಲಾಗಿದೆ. ಕುದುರೆ ಓಡಾಟದಿಂದಾಗಿ ಸ್ವಲ್ಪ ಸಮಯ ವಾಹನ ಸಂಚಾರಕ್ಕೆ ಆಡಚಣೆ ಉಂಟಾಗಿದೆ.
ಬ್ರಹ್ಮಾವರ ಸಮೀಪ ಆರೂರಿನ ಫಾರ್ಮ್ ವೊಂದರಿಂದ ತಪ್ಪಿಸಿಕೊಂಡ ಮೂರು ಕುದುರೆಗಳು ರಾಷ್ಟ್ರೀಯ ಹೆದ್ದಾರಿ ಮೂಲಕ ಓಡಿ ಬಂದು ವಾಹನ ಸಂಚಾರಕ್ಕೂ ಆಡಚಣೆ ಉಂಟಾದ ಹಿನ್ನೆಲೆಯಲ್ಲಿ ಕೊನೆಗೂ ಸಾಸ್ತಾನ ಟೋಲ್ ಗೇಟ್ ಸಮೀಪ ಸ್ಥಳೀಯರ ಸಹಕಾರದೊಂದಿಗೆ ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾದರು.
ಲಕ್ಷಾಂತರ ಬೆಲೆ ಬಾಳುವ ರೇಸ್ ಕುದುರೆಗಳಾಗಿದ್ದು ಹೆದ್ದಾರಿಯಲ್ಲಿ ಕುದುರೆ ಓಡಾಡುವುದನ್ನು ನೋಡಿದ ಪ್ರಯಾಣಿಕರು ಆಶ್ಚರ್ಯಚಿಕಿತರಾಗಿ ಬೆಚ್ಚಿಬಿದ್ದಿದ್ದಾರೆ. ಇದರ ಜೊತೆಗೆ ವಾಹನ ಸವಾರರು ಕುದುರೆಗಳ ಸುತ್ತ ಸುರಕ್ಷಿತವಾಗಿ ಸಂಚರಿಸಲು ಹರಸಾಹಸ ಪಡುತ್ತಿದ್ದರಿಂದ ವಾಹನ ಸಂಚಾರ ಸ್ವಲ್ಪ ಹೊತ್ತು ಸ್ಥಗಿತಗೊಂಡಿತ್ತು.
ಕುದುರೆ ಓಡಾಟ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದಂತೆ ತಕ್ಷಣ ಕುದುರೆ ಮಾಲೀಕರು ಸ್ಥಳಕ್ಕೆ ಧಾವಿಸಿ ಕುದುರೆಗಳನ್ನುಕೊಂಡೊಯ್ದಿದ್ದಾರೆ. ಇನ್ನೂ ಎರಡು ಕುದುರೆಗಳು ತಪ್ಪಿಸಿಕೊಂಡು ನಾಪತ್ತೆಯಾಗಿದ್ದು, ಈ ಕುದುರೆಗಳು ಎಲ್ಲಿಯಾದರು ಕಂಡು ಬಂದಲ್ಲಿ ಮಾಹಿತಿ ನೀಡುವಂತೆ ಮಾಲೀಕರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.