ಇತರೆ

ಸಾಲಿಗ್ರಾಮದಲ್ಲಿ ಗಂಡನ ಮನೆಯಿಂದಲೇ ಚಿನ್ನಾಭರಣ ಕದ್ದು ಹೆಂಡತಿ ಪರಾರಿ!

Views: 1145

ಕನ್ನಡ ಕರಾವಳಿ ಸುದ್ದಿ: ವಿವಾಹಿತೆಯೋರ್ವಳು ಮದುವೆಯಾಗಿ ಎರಡೇ ತಿಂಗಳಲ್ಲಿ ಗಂಡನ ಮನೆಯಿಂದ ಚಿನ್ನಾಭರಣ ಕದ್ದು ಪರಾರಿಯಾಧ ಘಟನೆ ಸಾಲಿಗ್ರಾಮದಲ್ಲಿ ನಡೆದಿದೆ.

ಸಾಲಿಗ್ರಾಮದ ಅಂತೋನಿ ಡಾಲ್ವಿನ್ ಕಾರ್ಡೋಜಾ ಅವರ ಕುಟುಂಬವು ಚಿನ್ನಾಭರಣ ಕಳೆದುಕೊಂಡಿದ್ದು, ಹಾಸನ ಮೂಲದ ಅನುಷಾ ಆರೋಪಿ

ಅಂತೋನಿ ಡಾಲ್ವಿನ್‌ಗೆ ಅನುಷಾ ಜತೆಗೆ 2023 ಡಿ.26ರಂದು ಸಾಸ್ತಾನದ ಸೈಂಟ್ ಅಂತೋನಿ ಚರ್ಚ್‌ನಲ್ಲಿ ಮದುವೆ ನೆರವೇರಿತ್ತು 2024ರ ಫೆ.9ರಂದು ಅನುಷಾ ತನ್ನ ತಾಯಿಗೆ ಆರೋಗ್ಯ ಸಮಸ್ಯೆ ಇದ್ದು ಮನೆಗೆ ಹೋಗಿ ನಾಲ್ಕು ದಿನಗಳಲ್ಲಿ ಮರಳುತ್ತೇನೆ ಎಂದು ಹೇಳಿ ಹೋಗಿದ್ದಳು. ಆದರೆ ಸಂಜೆ ಮನೆಯ ಕಪಾಟನ್ನು ನೋಡಿದಾಗ ಅಂತೋನಿ ಅವರ ತಾಯಿಯ 40 ಗ್ರಾಂ ತೂಕದ ಕರಿಮಣಿ, 10 ಗ್ರಾಂ ತೂಕದ 4 ಚಿನ್ನದ ಬಳೆಗಳು, 24 ಗ್ರಾಂ ಚಿನ್ನದ ಸರ, 3 ಚಿನ್ನದ ಉಂಗುರಗಳು, ಮತ್ತು ಕಿವಿ ಓಲೆ ಕಾಣೆಯಾಗಿರುವುದು ಗಮನಕ್ಕೆ ಬಂದಿರುತ್ತದೆ. ಈ ಬಗ್ಗೆ ಅನುಷಾಳನ್ನು ಕೇಳಿದಾಗ ತಪ್ರೊಪ್ಪಿ ಕೊಂಡ ಆಕೆ, ಮನೆಗೆ ವಾಪಸ್ ಬಂದಾಗ ನೀಡುವುದಾಗಿ ತಿಳಿಸಿದ್ದಳು. ಹೀಗಾಗಿ ಪ್ರಕರಣವನ್ನು ರಾಜಿ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಪ್ರಯತ್ನಿಸಲಾಗಿತ್ತು.

ಆದರೆ ಆರೋಪಿ ಅನುಷಾ ಚಿನ್ನಾಭರಣವನ್ನು ವಾಪಸ್ ನೀಡದೆ, ಮನೆಗೂ ಮರಳದೆ ಸತಾಯಿಸುತ್ತಿದ್ದಾಳೆ. ಚಿನ್ನಾಭರಣ ನೀಡಬೇಕಿದ್ದರೆ 25 ಲ.ರೂ. ನೀಡಬೇಕೆಂಬ ಬೇಡಿಕೆ ಈಡುತ್ತಿದ್ದಾಳೆ. ಹೀಗಾಗಿ ಆಕೆಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಂತೋನಿ ಕುಂದಾಪುರ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು.

Related Articles

Back to top button