ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಆರಂಭಿಸಲು ಒತ್ತಾಯಿಸಿ ಧರಣಿ

Views: 0
ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹಪ್ರಾಧ್ಯಾಪಕರ ನೇಮಕಾತಿ 2021ರ ಪ್ರಕ್ರಿಯೆಯನ್ನು ಆರಂಭಿಸುವಂತೆ ಒತ್ತಾಯಿಸಿ ಆಯ್ಕೆಯಾದ ಅಭ್ಯರ್ಥಿಗಳು ಇಂದು ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ಧರಣಿ ನಡೆಸಿದ್ದಾರೆ.
2021 ರಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿಯಾಗಿದ್ದ 21 ವಿಷಯಗಳಲ್ಲಿ 1,242 ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಸಂಬಂಧ ಅಧಿಸೂಚನೆ ಹೊರಡಿಸಲಾಗಿತ್ತು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವೂ 2022 ಮಾರ್ಚ್ ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು, ನಂತರ ಮೆರಿಟ್ ಪಟ್ಟಿ ಪ್ರಕಟಗೊಂಡಿದೆ. ದಾಖಲೆಗಳ ಪರಿಶೀಲನೆ ಪೂರ್ಣಗೊಂಡು ತಾತ್ಕಾಲಿಕ ಆಯ್ಕೆ ಪ್ರಕಟಿಸಿತ್ತು.ನಂತರ ಆಯ್ಕೆ ಪ್ರಕ್ರಿಯೆ ಮುಂದೆ ಸಾಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಹಾಯಕ ಪ್ರಾಧ್ಯಾಪಕರ ನೇಮಕಾತಿ 2021 ಬಾಕಿ ಉಳಿದಿರುವ ಆಯ್ಕೆ ಪಟ್ಟಿಯ ಗೆಜೆಟ್, ದಾಖಲಾತಿ ಪರಿಶೀಲನೆ, ಮೆಡಿಕಲ್, ಪೊಲೀಸ್ ವೆರಿಫಿಕೇಶನ್, ಅಂಕಪಟ್ಟಿಗಳ ನೈಜತಾ ಪ್ರಮಾಣ, ಸಿಂಧುತ್ವ ಪ್ರಕ್ರಿಯೆ ಮುಗಿದಿರಬೇಕಾಗಿತ್ತು. ಇನ್ನೂ ಆರಂಭವಾಗಿಲ್ಲದ ಪ್ರಕ್ರಿಯೆ ಕೂಡಲೇ ಆರಂಭಿಸಲು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಪರಿಷತ್ ಶಾಸಕರಾದ ಬೋಜೆ ಗೌಡರು, ಎ. ನಾರಾಯಣಸ್ವಾಮಿ, ಮರಿ ತಿಬ್ಬೇಗೌಡ, ದೇವೇಗೌಡ್ರು ಸೇರಿದಂತೆ ಹಲವು ರಾಜಕೀಯ ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.