ಇತರೆ
ಸರ್ಕಾರಿ ಬಸ್, ಜೀಪ್ ನಡುವೆ ಭೀಕರ ಅಪಘಾತ ನಾಲ್ವರು ಸ್ಥಳದಲ್ಲೇ ಸಾವು

Views: 79
ಮೈಸೂರು: KSRTC ಬಸ್, ಜೀಪ್ ನಡುವೆ ಡಿಕ್ಕಿ ಸಂಭವಿಸಿದ್ದು, ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನ RTO ಕಚೇರಿ ಬಳಿ ನಡೆದಿದೆ. ರಾಜೇಶ್, ಲೋಕೇಶ್, ಸೋಮೇಶ್ ಮತ್ತು ಕಾರು ಚಾಲಕ ಸಾವನ್ನಪ್ಪಿದ್ದಾರೆ.
ಸಾರಿಗೆ ಬಸ್ ವಿರಾಜಪೇಟೆಯಿಂದ ಬೆಂಗಳೂರಿನ ಕಡೆಗೆ ಬರುತ್ತಿತ್ತು. ಅತ್ತ ಜೀಪ್ನಲ್ಲಿದ್ದವರು ಶುಂಠಿ ಕೀಳಲು ಹೋಗುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ.
ಮೃತರು ಅಂತರಸಂತೆ ಜಿ.ಆರ್.ಕಾಲೋನಿ ನಿವಾಸಿಗಳಾಗಿದ್ದು, ಹುಣಸೂರು ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.