ಇತರೆ

ಸಮಾಧಿಯಿಂದ ಎದ್ದು ಬಂದು ದೂರು ಕೊಟ್ಟ ಮಹಿಳೆ?..ಆರೋಪಿಗಳು ಅರೆಸ್ಟ್ 

Views: 564

ಕನ್ನಡ ಕರಾವಳಿ ಸುದ್ದಿ: ತನ್ನ ಗಂಡನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಅಂತ ಯೋಗ ಶಿಕ್ಷಕಿಯ ಕಿಡ್ನಾಪ್ ಮಾಡಿ ಕೊಲೆ ಮಾಡಲು ಸುಪಾರಿ ನೀಡಿದ್ದ ಮಹಿಳೆ ಸೇರಿದಂತೆ 6 ಮಂದಿ ಅಪಹರಣಕಾರರನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

ಯೋಗಾ ಶಿಕ್ಷಕಿಯೊಬ್ಬರನ್ನು ಬೆಂಗಳೂರಿನಿಂದ ಕಿಡ್ನ್ಯಾಪ್ ಮಾಡಿದ್ದ ಕಿರಾತಕರು, ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ವಿರೋಧಿಸಿದಾಗ ಕತ್ತು ಹಿಸುಕಿ ಹತ್ಯೆಗೆ ಯತ್ನಿಸಿ, ಗುಂಡಿ ತೋಡಿ ಹೂತು ಹಾಕಿದ್ದರು. ಆದರೂ ಮಹಿಳೆ ಸಮಾಧಿಯಿಂದ ಎದ್ದು ಬಂದು ಪೊಲೀಸರಿಗೆ ದೂರು ನೀಡಿರುವ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಿನ ಕೆ.ಆರ್.ಪುರಂನಲ್ಲಿ ವಾಸವಾಗಿದ್ದ ಯೋಗಾ ಶಿಕ್ಷಕಿಯನ್ನು ಐವರು ಅ.23ರಂದು ಕಿಡ್ನ್ಯಾಪ್ ಮಾಡಿ, ಚಿಕ್ಕಬಳ್ಳಾಪುರದ ಹೊರವಲಯದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಬಳಿಕ ಆಕೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಲೈಂಗಿಕ ಕಿರುಕುಳ ನೀಡಿದ್ದು, ಮಹಿಳೆ ವಿರೋಧಿಸಿದ್ದಕ್ಕೆ ಆಕೆಯ ಕತ್ತು ಹಿಸುಕಿ ಹಿಂಸೆ ನೀಡಿದ್ದಾರೆ. ನಂತರದಲ್ಲಿ ಗುಂಡಿ ತೋಡಿ ಆಕೆಯನ್ನು ಹೂತು ಹಾಕಿ, ಅದರ ಮೇಲೆ ಮರದ ಕೊಂಬೆಯನ್ನಿಟ್ಟು ಆರೋಪಿಗಳು ಎಸ್ಕೇಪ್ ಆಗಿದ್ದರು.

ಹೂತು ಹಾಕಿದ್ದರೂ ಸಮಾಧಿಯಿಂದ ಜೀವಂತವಾಗಿ ಎದ್ದು ಬಂದಿರುವ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಿಡ್ನ್ಯಾಪ್ ಆಗಿದ್ದ ಶಿಕ್ಷಕಿ ಮಹಿಳೆ ದೂರು ಆಧರಿಸಿ ಆರೋಪಿಗಳ ಪತ್ತೆಗಾಗಿ ಚಿಕ್ಕಬಳ್ಳಾಪುರ ಎಸ್ ಪಿ ಕುಶಲ್ ಚೌಕ್ಸೆ ಪೊಲೀಸರ ವಿಶೇಷ ತಂಡ ರಚಿಸಿದ್ದರು. ಪ್ರಕರಣ ಸಂಬಂಧ ಸದ್ಯ ಓರ್ವ ಮಹಿಳೆ ಸೇರಿ ಆರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

 

Related Articles

Back to top button
error: Content is protected !!