ಸದ್ದಿಲ್ಲದೆ ಎಂಗೇಜ್‌ಮೆಂಟ್ ಮಾಡಿಕೊಂಡ ವೈಷ್ಣವಿ ಗೌಡ

Views: 110
ಕನ್ನಡ ಕರಾವಳಿ ಸುದ್ದಿ: ಕನ್ನಡ ಕಿರುತೆರೆಯ ಖ್ಯಾತ ನಟಿ ವೈಷ್ಣವಿ ಗೌಡ ಅವರು ಹಸೆಮಣೆ ಏರಲು ಸಜ್ಜಾಗಿದ್ದು, ಅನುಕೂಲ್ ಮಿಶ್ರಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಸದ್ದಿಲ್ಲದೆ ಅವರು ಎಂಗೇಜ್‌ಮೆಂಟ್ ಮಾಡಿಕೊಂಡಿದ್ದು, ಎಲ್ಲರಿಗೂ ಶಾಕ್ ನೀಡಿದ್ದಾರೆ. ನಿಶ್ಚಿತಾರ್ಥದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಎಲ್ಲರೂ ಈ ಜೋಡಿಗೆ ಶುಭಕೋರುತ್ತಿದ್ದಾರೆ.
ಮೂರು ವರ್ಷಗಳ ಹಿಂದೆ ಅವರ ಮದುವೆ ಕೂಡ ಫಿಕ್ಸ್ ಆಗಿತ್ತು. ವ್ಯಕ್ತಿಯೊಬ್ಬರ ಜೊತೆ ಮದುವೆ ಮಾತುಕತೆ ನಡೆದು, ಎರಡೂ ಕುಟುಂಬದವರ ಒಪ್ಪಿಗೆ ಮೇರೆಗೆ ಹೂವು ಮುಡಿಸುವ ಶಾಸ್ತ್ರ ಕೂಡ ನೆರವೇರಿತ್ತು. ಇನ್ನೇನು ನಿಶ್ಚಿತಾರ್ಥ, ಮದುವೆ ಎನ್ನುವಷ್ಟರಲ್ಲಿ ವೈಷ್ಣವಿ ಬದುಕಲ್ಲಿ ಕಹಿ ಘಟನೆಯೊಂದು ನಡೆದೇ ಹೋಗಿತ್ತು. ಈ ವಿಚಾರದಿಂದ ಅವರು ಬಹಳ ನೊಂದಿದ್ದರು.
ನಟ ವಿದ್ಯಾಭರಣ್ ಅವರೊಂದಿಗೆ ವೈಷ್ಣವಿ ಗೌಡ ಮದುವೆ ಮಾತುಕತೆ ನಡೆದಿತ್ತು. 2016ರಲ್ಲಿ ಚಾಕ್ಲೆಟ್ ಬಾಯ್ ಸಿನಿಮಾ ಶೂಟಿಂಗ್ ಮಾಡುವಾಗ ವೈಷ್ಣವಿ ವಿದ್ಯಾಭರಣ್ ನಡುವೆ ಪರಿಚಯವಾಗಿತ್ತು. ಇಬ್ಬರೂ ಎಂಗೇಜ್‌ಮೆಂಟ್ ಕೂಡ ಮಾಡಿಕೊಂಡಿದ್ದಾರೆ ಎಂದು ಸುದ್ದಿ ಹರಿದಾಡಿತ್ತು. ವೈರಲ್ ಆದ ವಿಡಿಯೋದಲ್ಲಿ ಇಬ್ಬರೂ ಪರಸ್ಪರ ಹಾರ ಬದಲಿಸಿಕೊಂಡು ಸಂಭ್ರಮದಿಂದ ಸಿಹಿ ತಿನ್ನಿಸಿದ್ದರು. ಹಾಗಾಗಿ ವೈಷ್ಣವಿ ಅವರ ನಿಶ್ಚಿತಾರ್ಥ ನಡೆದೇ ಹೋಯ್ತು ಎಂದೇ ಎಲ್ಲರೂ ಭಾವಿಸಿದ್ದರು. ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ವೈಷ್ಣವಿ ಅದು ನಿಶ್ಚಿತಾರ್ಥವಲ್ಲ, ಹಣ್ಣು ಕಾಯಿ ಇಡುವ ಶಾಸ್ತ್ರ ಮಾತ್ರ ಎಂದಿದ್ದರು. ಇದಾದ ಕೆಲವೇ ದಿನಗಳಲ್ಲಿ ಈ ಸಂಬಂಧ ಮುರಿದುಬಿದ್ದಿತ್ತು.