ಷರತ್ತುಗಳಿಲ್ಲದೆ ಗ್ಯಾರಂಟಿ ಯೋಜನೆ ಜಾರಿ: ಸದನದ ಹೊರಗೆ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ

Views: 0
ಯಾವುದೇ ಷರತ್ತುಗಳಿಲ್ಲದೆ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಸದನದ ಹೊರಗೆ ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿ ಧರಣಿ ಸತ್ಯಾಗ್ರಹ ನಡೆಸಿತು.
ಚುನಾವಣೆ ವೇಳೆ ಷರತ್ತುಗಳಿಲ್ಲದೆ ಐದು ಗ್ಯಾರಂಟಿಗಳನ್ನು ನೀಡುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಎಲ್ಲಾ ಗ್ಯಾರಂಟಿಗಳಿಗೂ ಷರತ್ತು ವಿಧಿಸಿದೆ. ಷರತ್ತು ರಹಿತವಾಗಿ ಗ್ಯಾರಂಟಿ ಜಾರಿಗೆ ಮಾಡಿದಿದ್ದರೆ ಅಧಿವೇಶನ ಮುಕ್ತಾಯದ ಬಳಿಕ ಜಿಲ್ಲೆಗಳಿಗೆ ತೆರಳಿ ಹೋರಾಟ ಮಾಡಲಾಗುವುದು. ಇಂದಿನ ಪ್ರತಿಭಟನೆ ಸಾಂಕೇತಿಕ ಸ್ವರೂಪವಾಗಿದ್ದು ,ಅಧಿವೇಶನ ಮುಗಿದ ಬಳಿಕ ಷರತ್ತು ಸಡಿಲಿಸದಿದ್ದರೆ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ಸಚಿವ ಭಗವಂತ ಖೂಬಾ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಕೆ ಎಸ್ ಈಶ್ವರಪ್ಪ, ಗೋವಿಂದ ಕಾರಜೋಳ, ವಿಶ್ವೇಶ್ವರ ಹೆಗಡೆ ಕಾಗೇರಿ, ಮುರುಗೇಶ ನಿರಾಣಿ, ಬಿ.ಸಿ. ನಾಗೇಶ್, ಹಾಲಪ್ಪ ಆಚಾರ್,ಬಿ ವೈ ವಿಜಯೇಂದ್ರ ಮುಂತಾದವರು ಧರಣಿಯಲ್ಲಿ ಪಾಲ್ಗೊಂಡಿದ್ದರು