ಇತರೆ
ಶೇಂದಿ ತೆಗೆಯುತ್ತಿದ್ದ ವೇಳೆ ತೆಂಗಿನ ಮರದಿಂದ ಬಿದ್ದು ಸಾವು

Views: 219
ಕನ್ನಡ ಕರಾವಳಿ ಸುದ್ದಿ: ತೆಂಗಿನ ಮರ ಹತ್ತಿ ಶೇಂದಿ ತೆಗೆಯುತ್ತಿದ್ದ ವೇಳೆ ಕೆಳಗೆ ಬಿದ್ದು ಗಂಭೀರ ಗಾಯಗೊಂಡ ಮೂರ್ತೆದಾರನೋರ್ವ ಸಾವನ್ನಪ್ಪಿರುವ ಘಟನೆ ಕೊಲ್ಯ ಕಣ್ಣೀರು ತೋಟ ಎಂಬಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.
ಕೊಲ್ಯ ಕಣ್ಣೀರು ತೋಟ, ಬಲ್ಯ ನಡುಪೊಲಿಕೆ ನಿವಾಸಿ ಯಶೋಧರ (46) ಮೃತಪಟ್ಟ ದುರ್ದೈವಿ.
ಮೃತ ಯಶೋಧರ್ ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಯಶೋಧರ್ ಅವರು ಈ ಹಿಂದೊಮ್ಮೆ ಲೋ ಬಿಪಿಯಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದರಂತೆ. ಲೋಬಿಪಿಯಿಂದಲೇ ಅವರಿಂದು ತೆಂಗಿನ ಮರದಿಂದ ಬಿದ್ದಿರೋದಾಗಿ ಹೇಳಲಾಗುತ್ತಿದೆ. ಅವರ ಅಕಾಲಿಕ ಸಾವು ಮನೆ ಮಂದಿ,ಬಂಧು, ಮಿತ್ರರನ್ನು ಆಘಾತಗೊಳಿಸಿದೆ.