ಶಿಕ್ಷಣ
ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ 76ರ ಗಣರಾಜ್ಯೋತ್ಸವ ಸಂಭ್ರಮ

Views: 487
ಕನ್ನಡ ಕರಾವಳಿ ಸುದ್ದಿ :ಕಿರಿಮಂಜೇಶ್ವರ ಶುಭದಾ ಅಂಗ್ಲ ಮಾಧ್ಯಮ ಶಾಲೆಯಲ್ಲಿ 76ನೇ ಗಣರಾಜ್ಯ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ ಧ್ವಜಾರೋಹಣವನ್ನು ನೆರವೇರಿಸಿದರು.
ಸಹ ಶಿಕ್ಷಕಿ ಶ್ರೀಮತಿ ಅನಿತಾ ನವೀನ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂವಿಧಾನ ಸಮಿತಿ, ಸಂವಿಧಾನದ ರಚನೆ ಹಾಗೂ ಸಂವಿಧಾನದ ಮಹತ್ವವನ್ನು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕಿ ದೀಪಿಕಾ ಅವರು ಸಂವಿಧಾನದ ಧ್ಯೇಯ ಮತ್ತು ಅಶೋತ್ತರಗಳನ್ನು ತಿಳಿಸುತ್ತಾ, ಪ್ರತಿಯೊಬ್ಬ ನಾಗರಿಕನಿಗಿರುವ ಹಕ್ಕುಗಳು ಹಾಗೂ ಅದನ್ನು ಉಪಯೋಗಿಸುವ ರೀತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಬೋಧಕ/ ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕಿ ಶ್ರೀಮತಿ ಐರಿನ್ ಸ್ವಾಗತಿಸಿದರು. , ಶ್ರೀಮತಿ ದಿವ್ಯಾ ಪ್ರಭು ವಂದಿಸಿದರು. ಶ್ರೇಯಾ ಕಾರ್ಯಕ್ರಮ ನಿರೂಪಿಸಿದರು.