ಇತರೆ

ಶಿರಾಡಿ ಘಾಟ್‌ ಹೆದ್ದಾರಿ ಬದಿಗೆ ಉರುಳಿ ಬಿದ್ದ ಟ್ಯಾಂಕರ್‌

Views: 60

ಕನ್ನಡ ಕರಾವಳಿ ಸುದ್ದಿ: ಟ್ಯಾಂಕರೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಗೆ ಮಗುಚಿ ಬಿದ್ದ ಘಟನೆ ಉಪ್ಪಿನಂಗಡಿ ಸಮೀಪದ ಶಿರಾಡಿ ಘಾಟ್ ನಲ್ಲಿ ಸೋಮವಾರ ನಡೆದಿದೆ.

ಶಿರಾಡಿ ಗಡಿ ದೇವಸ್ಥಾನದ ಮೇಲ್ಬಾಗದ ಪರಿಸರದಲ್ಲಿ ಈ ಘಟನೆ ಸಂಭವಿಸಿದೆ. ಅಪಘಾತದ ರಭಸಕ್ಕೆ ಟ್ಯಾಂಕರ್ ಗುಂಡ್ಯ ಹೊಳೆಗೆ ಬೀಳುವ ಸಾಧ್ಯತೆ ಇತ್ತಾದರೂ ಹೆದ್ದಾರಿ ಬದಿಯ ಮರಗಳು ತಡೆದಿದೆ.

ಘಟನಾ ಸ್ಥಳಕ್ಕೆ ಸಕಲೇಶಪುರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Related Articles

Back to top button