ಇತರೆ

ಶಿಕ್ಷಕಿ ಕೊಲೆಗೈದ ಹಂತಕರು ಬೆಟ್ಟದ ತಪ್ಪಲಲ್ಲಿ ಹೂತಿಟ್ಟು ಪರಾರಿ?

Views: 169

ಮಂಡ್ಯ: ಮೇಲುಕೋಟೆ ಖಾಸಗಿ ಶಾಲೆಯ ಶಿಕ್ಷಕಿ ದೀಪಿಕಾ ಕೊಲೆ ಪ್ರಕರಣದ ಸ್ಫೋಟಕ ಸಂಗತಿಗಳು ಬಯಲಾಗಿದೆ.ನಿತೀಶ್ ಎಂಬುವನು ಮೇಲೆ ಸಂಶಯಿಸಲಾಗಿದೆ.

ಘಟನಾ ಸ್ಥಳಕ್ಕೆ ಮಂಡ್ಯ ಎಸ್‌ಪಿ ಯತೀಶ್ ಅವರು ಭೇಟಿ ನೀಡಿದ್ದು ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಸದ್ಯದ ಮಾಹಿತಿಯ ಪ್ರಕಾರ ಶಿಕ್ಷಕಿಯನ್ನು ಕೊಲೆಗೈದ ಹಂತಕರು ಬೆಟ್ಟದ ತಪ್ಪಲಲ್ಲಿ ಹೂತಿಟ್ಟು ಪರಾರಿಯಾಗಿದ್ದಾರೆ.

ಕಳೆದ ಜನವರಿ 20ರಂದೇ ಪಾಂಡವಪುರ ತಾ. ಮೇಲುಕೋಟೆಯಲ್ಲಿ ಶಿಕ್ಷಕಿ ದೀಪಿಕಾ ಅವರ ಕೊಲೆಯಾಗಿದೆ. ಮಗಳು ನಾಪತ್ತೆಯಾಗಿದ್ದಾಳೆ ಅಂತ ತಂದೆ ವೆಂಕಟೇಶ್ ಪೊಲೀಸರಿಗೆ ದೂರು ನೀಡಿದ್ದಾರೆ. ಮೂರು ದಿನದ ಬಳಿಕ ಬೆಟ್ಟದ ತಪ್ಪಲಿನಲ್ಲೇ ದೀಪಿಕಾ ಮೃತದೇಹ ಪತ್ತೆಯಾಗಿದ್ದು, ನಿತೀಶ್ ಎನ್ನುವ ಯುವಕನ ಮೇಲೆ ಪೋಷಕರು ಕೊಲೆ ಮಾಡಿರೋ ಆರೋಪ ಮಾಡಿದ್ದಾರೆ. ‘

ಕೊಲೆಯಾಗಿರುವ ದೀಪಿಕಾ ಅವರು ಮೇಲುಕೋಟೆಯ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಜನವರಿ 20ರಂದು ಮಧ್ಯಾಹ್ನ ಶಾಲೆಯಿಂದ ತೆರಳಿದ್ದ ಶಿಕ್ಷಕಿ ಸಂಜೆಯಾದರೂ ಮನೆಗೆ ಬಂದಿಲ್ಲ. ಇದರಿಂದ ಆತಂಕದಲ್ಲಿದ್ದ ಪೋಷಕರು, ತಂದೆ ವೆಂಕಟೇಶ್ ಮಗಳು ನಾಪತ್ತೆ ಆಗಿದ್ದಾಳೆ ಅಂತ ದೂರು ನೀಡಿದ್ದಾರೆ. ದೂರು ನೀಡಿದ ಮೇಲೆ ಹುಡುಕಾಡಿದಾಗ ದೀಪಿಕಾ ಬಳಸುತ್ತಿದ್ದ ಡಿಯೋ ಸ್ಕೂಟರ್ ಪತ್ತೆಯಾಗಿದೆ.

ಮೇಲುಕೋಟೆ ಬೆಟ್ಟದ ತಪ್ಪಲಿನಲ್ಲಿ ಮೃತದೇಹದ ವಾಸನಗೆ ಹದ್ದು, ಕಾಗೆ ಹಾರಾಡುತ್ತಾ ಇದ್ದು, ಸ್ಥಳೀಯರಿಗೆ ಸಂಶಯ ಮೂಡಿತ್ತು. ಅನುಮಾನ ಬಂದು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದಾಗ ದೀಪಿಕಾ ಕೊಲೆಯಾಗಿದ್ದು ಪತ್ತೆಯಾಗಿದೆ. ದೀಪಿಕಾಳನ್ನು ಕೊಲೆಗೈದ ದುಷ್ಕರ್ಮಿಗಳು ಬೆಟ್ಟದ ತಪ್ಪಲಲ್ಲಿ ಹೂತಿಟ್ಟು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ರೀಲ್ಸ್ ಮತ್ತು ಆ್ಯಕ್ಟಿವ್ ಆಗಿದ್ದ ಶಿಕ್ಷಕಿ ದೀಪಿಕಾ ಅವರ ಸಾವು ಹಲವು ಅನುಮಾನಕ್ಕೆ ಕಾರಣವಾಗಿದೆ. ಬೆಟ್ಟದ ತಪ್ಪಲಿನಲ್ಲಿ ದೀಪಿಕಾ ಹಾಗೂ ನಿತೀಶ್ ಜಗಳವಾಡ್ತಿದ್ದ ವಿಡಿಯೋ ಕೂಡ ಪೊಲೀಸರಿಗೆ ಸಿಕ್ಕಿದೆ. 13 ಸೆಕೆಂಡ್​ಗಳ ವಿಡಿಯೋವನ್ನು ಪ್ರವಾಸಿಗರು ಪೊಲೀಸರಿಗೆ ನೀಡಿದ್ದು ನಮ್ಮ ಮಗಳನ್ನು ನಿತೀಶ್ ಕೊಲೆ ಮಾಡಿದ್ದಾನೆ ಅಂತ ಪೋಷಕರ ಆರೋಪ ಮಾಡಿದ್ದಾರೆ.

Related Articles

Back to top button