ಧಾರ್ಮಿಕ

ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನಕ್ಕಾಗಿ ಮಹಾ ವಿಸ್ಮಯ ಕಣ್ತುಂಬಿಕೊಂಡ ಭಕ್ತರು

Views: 169

ಕನ್ನಡ ಕರಾವಳಿ ಸುದ್ದಿ: ಹಿಂದೂಗಳ ಪವಿತ್ರ ಶ್ರದ್ಧಾ ಕೇಂದ್ರ ಕೇರಳದ ಶ್ರೀ ಕ್ಷೇತ್ರ ಶಬರಿಮಲೆಯಲ್ಲಿ ಮಕರ ಜ್ಯೋತಿ ರೂಪದಲ್ಲಿ ಅಯ್ಯಪ್ಪಸ್ವಾಮಿ ದರ್ಶನ ನೀಡಿದ್ದು, ಲಕ್ಷಾಂತರ ಭಕ್ತರು ಮಹಾ ವಿಸ್ಮಯವನ್ನು ಕಣ್ತುಂಬಿಕೊಂಡು ಪುನೀತರಾಗಿದ್ದಾರೆ.

ಮಕರ ಸಂಕ್ರಮಣದ ದಿನದಂದು ಶಬರಿಮಲೆಯಲ್ಲಿ ಅಯ್ಯಪ್ಪಸ್ವಾಮಿ, ಪೊನ್ನಂಬಲಮೇಡು ಬೆಟ್ಟದಲ್ಲಿ ಜ್ಯೋತಿ ಸ್ವರೂಪದಲ್ಲಿ ದರ್ಶನ ನೀಡುತ್ತಾನೆ ಎಂಬುದು ನಂಬಿಕೆ. ಈ ಅದ್ಭುತ ಕ್ಷಣಗಳನ್ನು ನೋಡಲೆಂದೇ ಅಯ್ಯಪ್ಪ ಭಕ್ತರು ಹಲವು ದಿನಗಳ ಕಾಲ ಕಠಿಣ ವ್ರತಾಚರಣೆಗಳನ್ನು ಮಾಡಿ ಮಾಲಾಧಾರಿಗಳಾಗಿ ದೇಶದ ಮೂಲೆ ಮೂಲೆಗಳಿಂದ ಬಂದು ಶಬರಿಮಲೆ ಬೆಟ್ಟ ಹತ್ತುತ್ತಾರೆ. ಮಕರ ಜ್ಯೋತಿ ದರ್ಶನಕ್ಕಾಗಿ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಕಾತರದಿಂದ ಕಾಯುತ್ತಾರೆ. ಹರಿಹರ ಸುತ ಅಯ್ಯಪ್ಪಸ್ವಾಮಿ ದರ್ಶನಕ್ಕಾಗಿ ಕಾದುನಿಂತಿದ್ದ ಭಕ್ತರಿಗೆ ಮಕರ ಜ್ಯೋತಿ ಸ್ವರೂಪದಲ್ಲಿ ದರ್ಶನ ನೀಡಿದ್ದಾನೆ.

ಇಂದು ಸಂಜೆ ಪೊನ್ನಂಬಲಮೇಡುವಿನ ಬೆಟ್ಟದಲ್ಲಿ ಮೂರು ಬಾರಿ ಮಕರ ಜ್ಯೋತಿ ರೂಪದಲ್ಲಿ ಅಯ್ಯಪ್ಪಸ್ವಾಮಿ ದರ್ಶನ ನೀಡಿದ್ದು, ಜ್ಯೋತಿ ದರ್ಶನ ಪಡೆದ ಭಕ್ತರು ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಜಯಘೋಷಗಳನ್ನು ಕೂಗಿ ಪುನೀತರಾದರು.

Related Articles

Back to top button