ಸಾಮಾಜಿಕ

ವಧುವಿನ ಜೊತೆ ಮದುವೆ ಆಗುವ ಬದಲು ಆಕೆಯ ತಾಯಿಯನ್ನು ಮದುವೆಯಾಗಿ ಮೋಸ! 

Views: 336

ಕನ್ನಡ ಕರಾವಳಿ ಸುದ್ದಿ: ಉತ್ತರಪ್ರದೇಶ ಮೀರತ್‌ನ ಬ್ರಹ್ಮಪುರಿ ಪ್ರದೇಶದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ.

ಯುವಕನೊಬ್ಬ ವಧುವಿನ ಜೊತೆ ಮದುವೆ ಆಗುವ ಬದಲು ವಧುವಿನ ತಾಯಿಯನ್ನು ಮದುವೆಯಾಗಿ ಮೋಸ ಹೋದ ಘಟನೆ ಉತ್ತರಪ್ರದೇಶ ಮೀರತ್‌ನ ಬ್ರಹ್ಮಪುರಿ ಪ್ರದೇಶದಲ್ಲಿ ನಡೆದಿದೆ.

ಮೊಹಮ್ಮದ್ ಅಜೀಮ್‌ಗೆ ಶಾಮ್ಲಿ ಜಿಲ್ಲೆಯ 21 ವರ್ಷದ ಮಂತಶಾ ಎಂಬ ಹುಡುಗಿ ಜೊತೆ ಮದುವೆ ನಿಶ್ಚಯವಾಗಿತ್ತು.ಕಳೆದ ಮಾರ್ಚ್ 31ರಂದು ಮದುವೆಯೂ ನಡೆದಿದೆ. ಮದುವೆಯ ಸಮಯದಲ್ಲಿ, ಮೌಲ್ವಿ ವಧುವಿನ ಹೆಸರನ್ನು ತಾಹಿರಾ ಅಂತ ಪ್ರಸ್ತಾಪಿಸಿದ್ದಾನೆ. ಈ ವೇಳೆ ಅಜೀಮ್‌ಗೆ ಅನುಮಾನ ಬಂದಿದೆ. ಅಷ್ಟೊತ್ತಿಗೆ ನಿಖಾ ಮುಗಿದು ಹೋಗಿದೆ.

ನಿಖಾ ಮುಗಿದ ನಂತರ ಅಜೀಮ್‌ ಬುರ್ಖಾ ತೆಗೆದು ನೋಡಿದ್ದಾನೆ. ಆಗ 45 ವರ್ಷದ ವಿಧವೆಯನ್ನು ಕಂಡು ಬೆಚ್ಚಿ ಬಿದ್ದಿದ್ದಾನೆ. ತಾನು ಮದುವೆ ಆಗಿರೋದು ವಧು ಮಂತಾಶಾಳ ತಾಯಿ ತಾಹಿರಾ ಅಂತ ಗೊತ್ತಾಗಿದೆ. .

Related Articles

Back to top button