ಧಾರ್ಮಿಕ

ವಕ್ವಾಡಿ 32ನೇ ಸಾರ್ವಜನಿಕ ಗಣೇಶೋತ್ಸವದ ನೂತನ ಅಧ್ಯಕ್ಷರಾಗಿ ಗಿರೀಶ್ ಆಚಾರ್, ಕಾರ್ಯದರ್ಶಿಯಾಗಿ ಕೃಷ್ಣ ಶೆಟ್ಟಿಗಾರ್ ಆಯ್ಕೆ

Views: 40

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ವಕ್ವಾಡಿ ಸಾರ್ವಜನಿಕ ಗಣೇಶೋತ್ಸವದ 32 ನೇ ಸಾಲಿನ ಅಧ್ಯಕ್ಷರಾಗಿ ಕಲಾವಿದ ಗಿರೀಶ್ ಆಚಾರ್ ವಕ್ವಾಡಿ ಹಾಗೂ ಕಾರ್ಯದರ್ಶಿಯಾಗಿ ವಕ್ವಾಡಿ ಫ್ರೆಂಡ್ಸ್ ಅಧ್ಯಕ್ಷರಾದ ಕೃಷ್ಣ ಶೆಟ್ಟಿಗಾರ್ ಆಯ್ಕೆಯಾಗಿದ್ದಾರೆ.

ಇತ್ತೀಚಿಗಷ್ಟೇ ಬ್ರಹ್ಮಕಲಶೋತ್ಸವ ಸಂಪನ್ನ ಗೊಂಡ ವಕ್ವಾಡಿ ಮಹಾಲಿಂಗೇಶ್ವರ ಸನ್ನಿದಾನದಲ್ಲಿ ಕಳೆದ 32 ವರ್ಷ ಗಳಿಂದ ಸಾಗಿ ಬರುತ್ತಿರುವ ಗಣೇಶೋತ್ಸವವು ಅನೇಕ ಧಾರ್ಮಿಕ ವಿಧಿ ವಿಧಾನ ಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತದೆ.

ಇತ್ತೀಚಿಗೆ ಗಣೇಶೋತ್ಸವ ಸಮಿತಿ ಸಭೆಯಲ್ಲಿ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಈ ಬಾರಿ ಅಧ್ಯಕ್ಷರಾಗಿ ಚಿತ್ರಕಲಾ ಶಿಕ್ಷಕ ಗಿರೀಶ್ ಆಚಾರ್ ಆಯ್ಕೆಯಾಗಿದ್ದು ,ಇವರು ಚಿತ್ರ ಕಲಾ ತರಗತಿಗಳನ್ನು ನಡೆಸುತ್ತಿದ್ದಾರೆ ಹಾಗೂ ಅನೇಕ ಸಂಘ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

Related Articles

Back to top button