ಹೋಮ ಹವನದಿಂದ ರೋಗ ನಿವಾರಣೆ, ಪರಿಸರವು ಶುದ್ಧಿ
ಹೋಮ ಹವನಗಳನ್ನು ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ನೆಮ್ಮದಿ ಶಾಂತಿ ಪಡೆದು, ಮಾನವನ ಸಂತೋಷದಿಂದ ಆರೋಗ್ಯದಿಂದ ಇರುತ್ತಾನೆ. ಪರಿಸರವು ಶುದ್ದವಾಗಿರುತ್ತದೆ ಎಂಬುದನ್ನು ವಿಜ್ಞಾನ ಒಪ್ಪಿಕೊಂಡಿದೆ.

Views: 23
ಹೋಮ, ಹವನ ಮಾಡಿ ತೊಂದರೆ ನಿವಾರಿಸಿ ಕೊಳ್ಳುವ ಕ್ರಿಯೆ ವೇದ, ಪುರಾಣ,ಇತಿಹಾಸ ಕಾಲದಿಂದಲೂ ಜಾರಿಯಲ್ಲಿದೆ. ಇದರಿಂದ ಮಾನವನನ್ನು ಕಾಡುವ ಅನೇಕ ಕಷ್ಟ ಕಾರ್ಪಣ್ಯ ರೋಗ ರುಜಿನಾ ಸೇರಿದಂತೆ ಹಲವು ಬಾಧೆ ನಿವಾರಿಸಿಕೊಳ್ಳಬಹುದು ಎಂಬುದು ಹಿಂದೂ ಧರ್ಮದ ನಂಬಿಕೆ.
ಹೋಮ ಹವನಗಳನ್ನು ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ನೆಮ್ಮದಿ ಶಾಂತಿ ಪಡೆದು, ಮಾನವನ ಸಂತೋಷದಿಂದ ಆರೋಗ್ಯದಿಂದ ಇರುತ್ತಾನೆ. ಪರಿಸರವು ಶುದ್ದವಾಗಿರುತ್ತದೆ ಎಂಬುದನ್ನು ವಿಜ್ಞಾನ ಒಪ್ಪಿಕೊಂಡಿದೆ.
ಗಾಯತ್ರಿ ಮಂತ್ರದಲ್ಲಿ ಬಹಳ ಶಕ್ತಿ ಅಡಗಿದೆ ಗಾಯತ್ರಿ ಮಂತ್ರದೊಂದಿಗೆ ಹವನ ಕೈಗೊಂಡರೆ ಎಷ್ಟೋ ರೋಗ ನಾಶವಾಗುತ್ತದೆ. ಯಾವುದೇ ಪ್ರಕಾರದ ಜ್ವರ ಶ್ರಮನಗೊಳಿಸಬೇಕಾದರೆ ಹಾಲಿನಲ್ಲಿ ಮಾವಿನ ಎಲೆಯನ್ನು ಹಾಕಿ ಗಾಯತ್ರಿ ಹವನ ಮಾಡಿದರೆ ಜ್ವರ ಇಳಿದು ಹೋಗುತ್ತದೆ. ಅರಳಿ ಸಮಿತ್ತಿನೊಂದಿಗೆ ಗಾಯತ್ರಿ ಮಂತ್ರ ಉಚ್ಚಾರಣೆ ಮಾಡುತ್ತ ಹವನ ಮಾಡಿದರೆ ವಿಜಯ ಪ್ರಾಪ್ತಿಯಾಗುತ್ತದೆ.
ಗಾಯತ್ರಿ ಮಂತ್ರದೊಂದಿಗೆ ಎಳ್ಳು ಮತ್ತು ಸಮಿತ್ತಿ ನೊಂದಿಗೆ ಹವನ ಮಾಡಿದರೆ ವಾಯುರೋಗ, ಹೃದಯದ ಕಾಯಿಲೆ, ಬಿಪಿ, ಸಿಹಿ ಮೂತ್ರ ಸಂಬಂಧಿ ವಿಕಾರಗಳ ನಿವಾರಣೆಗೆ ಸಹಾಯವಾಗುತ್ತದೆ.
ಹಾಲಿನಲ್ಲಿ ಜೇನುತುಪ್ಪ ಸೇರಿಸಿ ಇಲ್ಲವೇ ಹಾಲು, ಮೊಸರು ಅಥವಾ ತುಪ್ಪದೊಂದಿಗೆ ಗಾಯತ್ರಿ ಮಂತ್ರದ ಹವನ ಮಾಡಿದರೆ ಕ್ಷಯ ರೋಗದಿಂದ ಮುಕ್ತಿ ಪಡೆಯಬಹುದು.
ವಿದ್ಯಾಪ್ರಾಪ್ತಿಗಾಗಿ ಮುತ್ತುಗದ ಸಮಿತ್ತಿಯಿಂದ ಅನ್ನಪ್ರಾಪ್ತಿಗಾಗಿ ಜೋಳದಿಂದ ಶತ್ರುನಾಶಕ್ಕಾಗಿ ಗುಗ್ಗುಳದಿಂದ ಹವನ ಮಾಡುವುದರಿಂದ ಪರಿಹಾರ ದೊರಕುತ್ತದೆ.
ದೀರ್ಘಕಾಲದಿಂದ ರೋಗದಿಂದ ಬಳಲುತ್ತಾ ಮರಣ ಶಯ್ಯೆಯಲ್ಲಿರುವವರಿಗಾಗಿ ಹವನ ಮಾಡುವುದು ಉತ್ತಮ ಶಾರೀರಿಕ ಸೌಂದರ್ಯ ಮತ್ತು ಮನಪ್ರಾಪ್ತಿಗಾಗಿ ಕಮಲದ ಹೂವಿನಿಂದ ಗಾಯತ್ರಿ ಹವನ ಮಾಡಬೇಕು ಇಲ್ಲವೇ ಬಿಲ್ವಪತ್ರೆಯಿಂದ ಹೂವಿನಿಂದ ಅಥವಾ ಫಲದಿಂದ ಹವನ ಮಾಡಿದರೆ ಸೌಂದರ್ಯ ವೃದ್ಧಿಯಾಗುತ್ತದೆ.
ಮಂಗಳ ಲಾಭ ವಿಜಯಪ್ರಾಪ್ತಿ ಲಕ್ಷ್ಯ ಸಿದ್ದಿ ಮತ್ತು ಆಂಜನೇಯನನ್ನು ಪ್ರಸನ್ನಗೊಳಿಸುವುದಕ್ಕಾಗಿ ಮಂಗಳವಾರ ಇಲ್ಲವೇ ಶನಿವಾರ ಸುಂದರಕಾಂಡದಿಂದ ಹವನ ಮಾಡುವುದು ಉಪಯೋಗಿಯಾಗಿದೆ. ಈ ಹವನವನ್ನು ಬಿಲ್ವ ವೃಕ್ಷದ ಕೆಳಗಡೆ ಆಂಜನೇಯ ದೇವಸ್ಥಾನ ನದಿಯ ದಂಡೆಗಳಲ್ಲಿ ಮಾಡುವುದು ಇನ್ನೂ ಉತ್ತಮವಾಗಿದೆ.