ಕೃಷಿ
ರೈತ ಸಂಘದ ಪ್ರತಿಭಟನೆ :ಹೆದ್ದಾರಿ ತಡೆ

Views: 0
ಕೆರೆಗಳಿಗೆ ನೀರು ತುಂಬಿಸುವ ಯೋಜನೆ ರೈತರ ಜೀವ ನಾಡಿಯಾಗಿದ್ದು, ವಲಸೆ ಹೋಗಿದ್ದ ಎಷ್ಟೋ ರೈತರ ಕುಟುಂಬಗಳು ಪುನಃ ವ್ಯವಸಾಯಕ್ಕೆ ಮರಳಲು ಈ ಯೋಜನೆಯ ಕಾರಣ ಇಂತಹ ಮಹತ್ವದ ಯೋಜನೆಗೆ ಸರಕಾರಕ್ಕೆ ಉಪಯೋಗವಿಲ್ಲ ಎಂದಿರುವುದು ರೈತ ಸಮುದಾಯಕ್ಕೆ ಮಾಡಿರುವ ಅಪಮಾನವಾಗಿದೆ.
ಸಾರ್ವಜನಿಕರಿಗೆ ಉಪಯೋಗವಿಲ್ಲ ಎಂದು ಅನೇಕ ಯೋಜನೆಗಳನ್ನು ಸರ್ಕಾರಗಳು ಕೈಗೊಂಡು ಸಾಕಷ್ಟು ಹಣಕಾಸು ವ್ಯರ್ಥ ಮಾಡಿದೆ ಎಂದು ಸದನದಲ್ಲಿ ಹೇಳಿಕೆ ಕೊಟ್ಟಿರುವುದು ಖಂಡನೀಯ
ಇಂತಹ ಹೇಳಿಕೆಯನ್ನು ಹಿಂಪಡೆದುಕೊಂಡು ರೈತ ಸಮುದಾಯಕ್ಕೆ ಕ್ಷಮೆ ಕೋರಬೇಕು ಎಂದು ರೈತರು ಅಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಭೇಟಿ ನೀಡಿ ಪ್ರತಿಭಟನೆ ನಡೆಸುತ್ತಿರುವ ರೈತರ ಅಹವಾಲು ಆಲಿಸಿದರು.
ರೈತರ ಮೂಲಕ ಮುಖ್ಯಮಂತ್ರಿ ಅವರಿಗೆ ತಮ್ಮ ಮನವಿ ಸಲ್ಲಿಸಲಾಯಿತು.