ಸಾಂಸ್ಕೃತಿಕ

‘ರಾಮಲೀಲಾ’ ನಾಟಕದಲ್ಲಿ ಸೀತೆ ಪಾತ್ರಧಾರಿ ಧೂಮಪಾನ ವಿಡಿಯೋ ಭಾರಿ ವಿವಾದ!

Views: 128

ಮಹಾರಾಷ್ಟ್ರದ ವಿಶ್ವವಿದ್ಯಾಲಯವೊಂದರಲ್ಲಿ ವಿದ್ಯಾರ್ಥಿಗಳು ರಾಮಾಯಣ ಆಧಾರಿತ ನಾಟಕದಲ್ಲಿ ‘ಸೀತೆ’ ಪಾತ್ರಧಾರಿಯೂ ಧೂಮಪಾನ ಮಾಡುತ್ತಿರೋ ವಿಡಿಯೋ ಭಾರಿ ವಿವಾದ ಸೃಷ್ಟಿಸಿದೆ.

‘ರಾಮಲೀಲಾ’ ಆಧಾರಿತ ನಾಟಕದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದಲ್ಲಿ ಪುಣೆಯ ಸಾವಿತ್ರಿ ಬಾಯಿ ಫುಲೆ ವಿಶ್ವವಿದ್ಯಾಲಯದ ಓರ್ವ ಪ್ರೊಫೆಸರ್ ಮತ್ತು ಐವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಕ್ಷೇಪಾರ್ಹ ನಾಟಕವನ್ನು ಮಹಾರಾಷ್ಟ್ರದ ವಿಶ್ವವಿದ್ಯಾಲಯವೊಂದರಲ್ಲಿ ವಿದ್ಯಾರ್ಥಿಗಳು ಪ್ರದರ್ಶನ ನೀಡುತ್ತಿದ್ದರು. ಇದೇ ವೇಳೆ ಸೀತಾ ಮಾತೆಯ ಪಾತ್ರಧಾರಿ ಸಿಗರೇಟ್​ ಸೇದುತ್ತಿದ್ದ. ಇದರಿಂದ ಕುಪಿತಗೊಂಡ ಆರ್​ಎಸ್​ಎಸ್​ನ ವಿದ್ಯಾರ್ಥಿ ಘಟಕ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸದಸ್ಯರು ಪ್ರತಿಭಟನೆ ನಡೆಸಿದರು. ಈ ವೇಳೆ ಎಬಿವಿಪಿ ಹಾಗೂ ಪುಣೆ ವಿಶ್ವವಿದ್ಯಾಲಯದ ಲಲಿತ ಕಲಾ ಕೇಂದ್ರದ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದೆ.

ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಲಲಿತ ಕಲಾ ವಿಭಾಗ ಮುಖ್ಯಸ್ಥ ಡಾ ಪ್ರವೀಣ್ ಭೋಳೆ ಹಾಗೂ ನಾಟಕ ಪಾತ್ರಧಾರಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅದೇನೆ ಇರಲಿ. ನಾಟಕ ಅಭಿನಯವು ಸಮಾಜಕ್ಕೆ ಮಾದರಿಯಾಗ ಬೇಕೇ ಹೊರತು ಮಾರಕವಾಗಬಾರದು.. ಸದ್ಯ ದೇಶದೆಲ್ಲೆಡೆ ಪುಣೆ ವಿವಿ ವಿದ್ಯಾರ್ಥಿಗಳ ನಾಟಕ ಪ್ರದರ್ಶನ ಭಾರಿ ವಿವಾದಕ್ಕೆ ಕಾರಣವಾಗಿದೆ.

Related Articles

Back to top button