ರಾಜಕೀಯ
ರಾಜ್ಯಸಭೆ ಚುನಾವಣೆ:ಕಾಂಗ್ರೆಸ್ ರಾಜ್ಯದಿಂದ ಯಾರ್ ಯಾರ ಹೆಸರು ಘೋಷಣೆ ಮಾಡಿದೆ?

Views: 93
ಎಐಸಿಸಿ ವರಿಷ್ಠೆ ಸೋನಿಯಾ ಗಾಂಧಿ ಅವರು ರಾಜ್ಯಸಭಾ ಚುನಾವಣೆಗೆ ರಾಜಸ್ಥಾನದಿಂದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಬೆನ್ನಲ್ಲೇ ಕಾಂಗ್ರೆಸ್ ಕರ್ನಾಟಕದಿಂದ ಮೂವರ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ.
ಸೈಯ್ಯದ್ ನಾಸೀರ್ ಹುಸೇನ್, ಜಿ.ಸಿ ಚಂದ್ರಶೇಖರ್ ಹಾಗೂ ಅಜಯ್ ಮಾಕನ್ಗೆ ಈ ಬಾರಿ ಕರ್ನಾಟಕದಿಂದ ರಾಜ್ಯಸಭೆಗೆ ಟಿಕೆಟ್ ಘೋಷಣೆ ಮಾಡಲಾಗಿದೆ.
ಈಗಾಗಲೇ ಬಿಜೆಪಿ ರಾಜ್ಯಸಭೆ ಎಲೆಕ್ಷನ್ಗೆ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಸದ್ಯ ಕಾಂಗ್ರೆಸ್ ಕೂಡ ಮೂವರ ಹೆಸರುಗಳನ್ನು ಅನೌನ್ಸ್ ಮಾಡಿದೆ.
ಡಾಕ್ಟರ್ ಎಲ್ ಹನುಮಂತಯ್ಯ, ಬಿ.ಎಲ್ ಶಂಕರ್, ಎಂ.ಸಿ ವೇಣುಗೋಪಾಲ್ ಅವರಿಗೆ ಟಿಕೆಟ್ ನೀಡುತ್ತಾರೆ ಎಂದು ಊಹಿಸಲಾಗಿತ್ತು. ಆದರೆ ಈ ಮೂವರನ್ನ ಬಿಟ್ಟು ಬೇರೆ ಅಭ್ಯರ್ಥಿಗಳಿ ಕಾಂಗ್ರೆಸ್ ಮಣೆ ಹಾಕಿದೆ. ಇದರಿಂದ ಎಲ್ ಹನುಮಂತಯ್ಯ, ಬಿ.ಎಲ್ ಶಂಕರ್, ಎಂ.ಸಿ ವೇಣುಗೋಪಾಲ್ ಅವರಿಗೆ ದೊಡ್ಡ ನಿರಾಸೆ ಆಗಿದೆ.