ಇತರೆ

ರಸ್ತೆ ಎಂದು ತಿಳಿದು ರೈಲ್ವೆ ಹಳಿಯ ಮೇಲೆ ಕಾರು ಚಲಾಯಿಸಿದ ವ್ಯಕ್ತಿ

Views: 0

ಕುಡಿದ ಮತ್ತಿನಲ್ಲಿ ರಸ್ತೆ ಎಂದು ತಿಳಿದು ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಕಣ್ಣೂರು ನಗರ ಪೊಲೀಸರು ಬಂಧಿಸಿದ್ದಾರೆ.

ಕೇರಳದ ಅಂಚರಕಂಡಿ ನಿವಾಸಿ ಜಯಪ್ರಕಾಶ್ ಎನ್ನುವವರು ರೈಲ್ವೆ ಹಳಿಯ ಮೇಲೆ 15 ಮೀಟರ್ ದೂರ ಕಾರು ಚಲಾಯಿಸಿದ್ದಾನೆ.

ಸ್ಥಳದಲ್ಲಿಯೇ ಕಾರು ಆಫ್ ಆಗಿ ನಿಂತಿತ್ತು.ಕೂಡಲೇ ರೈಲ್ವೆ ಗೇಟ್ ಸಿಬ್ಬಂದಿ ಕಾರ್ಯ ಪ್ರವರ್ತರಾಗಿ ಪೊಲೀಸರಿಗೆ ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಳಿಯಲ್ಲಿ ಸಿಲುಕಿದ ಕಾರನ್ನು ತೆಗೆದು, ಚಾಲಕನನ್ನು ಬಂಧಿಸಿದ್ದಾರೆ. ನಂತರ ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.ಎಂದು ತಿಳಿದು ಬಂದಿದೆ.

Related Articles

Back to top button