ಇತರೆ

‘ಮೈಸೂರು ಪಾಕ್‌’ನಲ್ಲಿ “ಪಾಕ್” ಇರುವ ಕಾರಣ “ಮೈಸೂರು ಶ್ರೀ” ಎಂದು ಬದಲಾವಣೆ! 

Views: 101

ಕನ್ನಡ ಕರಾವಳಿ ಸುದ್ದಿ: ಪುಲ್ವಾಮಾ ದಾಳಿಯ ನಂತರ ಭಾರತ ಆಪರೇಷನ್‌ ಸಿಂದೂರ ಆರಂಭಿಸಿ ಪಾಕಿಸ್ತಾನಕ್ಕೆ ಚಳಿ ಬಿಡಿಸಿದೆ. ಇದಾದ ನಂತರದಿಂದ ಭಾರತದಲ್ಲಿ ಪಾಕಿಸ್ತಾನದ ಹೆಸರಿಗೂ ಜನ ದ್ವೇಷ ಮಾಡಲು ಆರಂಭಿಸಿದ್ದಾರೆ.

ನಮ್ಮ ಹೆಮ್ಮೆಯ ಮೈಸೂರು ಪಾಕ್‌ನಲ್ಲಿ ‘ಪಾಕ್’ ಎನ್ನುವ ಪದ ಇರುವ ಕಾರಣ ಕೆಲವು ಅಂಗಡಿಗಳಲ್ಲಿ ಮೈಸೂರು ಪಾಕ್‌ನ್ನು “ಮೈಸೂರು ಶ್ರೀ” ಎಂದು ಬದಲಾವಣೆ ಮಾಡಿದ್ದಾರೆ.

ಆದರೆ ‘ಪಾಕ್’ ಎಂದು ಕರೆಯದೇ ‘ಮೈಸೂರು ಪಾಕ’ ಎಂದು ಕರೆದರೂ ಸಾಕು, ಅದನ್ನು ಬಿಟ್ಟು ಹೆಸರನ್ನು ಬದಲಾವಣೆ ಮಾಡೋದು ಸರಿಯಲ್ಲ ಎನ್ನುವ ಕೂಗು ಎದ್ದಿದೆ.

‘ಮೈಸೂರು ಪಾಕ್’ ಎಂಬ ಹೆಸರನ್ನು ಮೈಸೂರಿನ ರಾಜ 4ನೇ ಕೃಷ್ಣರಾಜ ಒಡೆಯರ್ ಆಳ್ವಿಕೆಯಲ್ಲಿ ಈ ಹೆಸರನ್ನು ಇಡಲಾಗಿತ್ತು. ಇದೀಗ ಈ ಹೆಸರನ್ನು ಬದಲಾವಣೆ ಮಾಡಿರುವ ಬಗ್ಗೆ ರಾಜ ಕಾಲದಿಂದಲ್ಲೂ ರಾಜಮನೆತನದಲ್ಲಿ ಅಡುಗೆ ಮಾಡಿಕೊಂಡು ಬರುತ್ತಿದ್ದ ವಂಶಸ್ಥರಾದ ಎಸ್‌. ನಟರಾಜ್‌ ಅವರು ‘ಮೈಸೂರ್ ಪಾಕ್’ ಹೆಸರನ್ನು ಬದಲಾವಣೆ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

Related Articles

Back to top button