ಮೈಸೂರು ಒಡೆಯರ್ ಯದುವೀರ್ ರಾಜಕೀಯ ಎಂಟ್ರಿಗೆ ತೆರೆಮರೆಯಲ್ಲಿ ಬಿಜೆಪಿ ಕಸರತ್ತು..!!!

Views: 42
ದೆಹಲಿಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಸಿಎಂ ತವರು ಮೈಸೂರಿನಲ್ಲಿ ಏಕಾಏಕಿ ಒಡೆಯರ್ ಅಸ್ತ್ರ ಪ್ರಯೋಗದ ಸುಳಿವು ಸಿಕ್ಕಿದೆ. ಶ್ರೀಕಂಠದತ್ತ ಒಡೆಯರ್ ಬಳಿಕ ಅರಮನೆ ಕುಟುಂಬದಿಂದ ಯದುವೀರ್ ಹೆಸರು ಮತ್ತೆ ತೇಲಿ ಬಂದಿದೆ. ಮೈಸೂರು ಒಡೆಯರ್ ರಾಜಕೀಯ ಎಂಟ್ರಿಗೆ ತೆರೆಮರೆಯಲ್ಲಿ ಕಸರತ್ತು ಶುರುವಾಗಿದ್ದು, ರಾಜಸ್ಥಾನದ ಸಂಬಂಧಿಕರ ಮೂಲಕ ಲಾಬಿ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ರಾಜಮನೆತನದ ಮೇಲಿನ ಜನರ ಪ್ರೀತಿ, ವಿಶ್ವಾಸದ ಕಾರಣ ಮಂಡ್ಯ ಮತ್ತು ಚಾಮರಾಜನಗರದಲ್ಲೂ ಪ್ರಭಾವದ ಸಾಧ್ಯತೆ ಇದೆ ಅನ್ನೋ ಮಾತು ಬಿಜೆಪಿಯಲ್ಲಿ ಕೇಳಿ ಬರ್ತಿದೆ. ಒಟ್ಟಾರೆ, ಮುಂದಿನ ವಾರವೇ ಲೋಕಸಭೆ ಚುನಾವಣೆಗೆ ಮುಹೂರ್ತ ನಿಗದಿ ಆಗಲಿದೆ. ಇತ್ತ ದೆಹಲಿಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಎಲ್ಲಾ ಪಕ್ಷಗಳ ನಾಯಕರ ಮನೆ ಮುಂದೇ ಟಿಕೆಟ್ ಆಕಾಂಕ್ಷಿಗಳು ಸಾಲುಗಟ್ಟಿದ್ದಾರೆ. ತಮ್ಮದೇ ಲೆಕ್ಕಾಚಾರ ವರದಿ ಪ್ರಸ್ತಾಪಿಸಿ ಟಿಕೆಟ್ಗೆ ಡಿಮ್ಯಾಂಡ್ ಮಾಡ್ತಿದ್ದಾರೆ. ಆದ್ರೆ, ಹೈಕಮಾಂಡ್ ನಾಯಕರು ಮಾತ್ರ ಗೆಲ್ಲುವ ಕುದುರೆಗಷ್ಟೇ ಟಿಕೆಟ್ ಅನ್ನೋ ಮಾನದಂಡ ಮುಂದಿಟ್ಟು ಚಿಂತನ ಮಂಥನ ನಡೆಸುತ್ತಿದ್ದಾರೆ. ಎಲ್ಲಾ ಹಾಲಿ ಸಂಸದರಿಗೆ ಟಿಕೆಟ್ ಸಿಗುವುದು ಡೌಟ್ ಎನ್ನಲಾಗಿದೆ.