ರಾಜಕೀಯ
ಮೇ. 8 ರಂದು ಸಂಜೆ 5 ಕ್ಕೆ ಬಹಿರಂಗ ಪ್ರಚಾರ ಅಂತ್ಯ

Views: 0
ಕುಂದಾಪುರ : ಮೇ. 10 ರಂದು ಮತದಾನ ನಡೆಯಲಿರುವ ಹಿನ್ನಲೆಯಲ್ಲಿ ಬಹಿರಂಗ ಪ್ರಚಾರಕ್ಕೆ ಇನ್ನು ಕೇವಲ 3 ದಿನ ಬಾಕಿ ಇದೆ.
ಸ್ಥಳೀಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರಲ್ಲದ ರಾಜಕೀಯ ಪ್ರಚಾರಕರು, ರಾಜಕಾರಣಿಗಳು, ಮೆರವಣಿಗೆ ಆಯೋಜಕರು ಸೇರಿದಂತೆ ಇನ್ನಿತರರು ಮೇ. 8 ರಂದು ಸಂಜೆ 6 ಗಂಟೆಯೊಳಗೆ ಕ್ಷೇತ್ರ ತೊರೆಯಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮೇ. 6,7,ಹಾಗೂ ಮೇ 8 ರಂದು ಸಂಜೆ 6 ಕ್ಕೆ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಮರುದಿನ ಮೇ. 9 ರಂದು ಮನೆ ಮನೆ ಪ್ರಚಾರ ನಡೆಯಲಿದೆ.
80 ವಷ೯ ಮೇಲ್ಪಟ್ಟವರಿಗೆ, ಅಂಗವಿಕಲರಿಗೆ ಮೇ. 6 ಕೊನೆಯ ದಿನ ಮತದಾನವಾಗಿರುತ್ತದೆ.ಚುನಾವಣೆಗೆ ಮೂರು ದಿನ ಬಾಕಿ ಇರುವುದರಿಂದ ವಿವಿಧ ರಾಜಕೀಯ ಪಕ್ಷಗಳು ಕೊನೆಯದಾಗಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ತಮ್ಮ ತಮ್ಮ ಕ್ಷೇತ್ರದಲ್ಲಿ ಮುಂದೆ ಅಧಿಕಾರಕ್ಕೆ ಬರುವವರು ಯಾರು ಎಂಬುವುದೇ ಈಗಿನ ಚಚೆ೯ ವಿಷಯವಾಗಿದೆ.