ಇತರೆ
ಸಿದ್ದಾಪುರ:ತೋಟಕ್ಕೆ ನೀರು ಬಿಡಲು ಹೋದಾಗ ಕೃಷಿಕ ಸಾವು
Views: 40
ಕನ್ನಡ ಕರಾವಳಿ ಸುದ್ದಿ: ತೋಟಕ್ಕೆ ನೀರು ಬಿಡಲು ಹೋದಾಗ ಕೃಷಿಕರೊಬ್ಬರು ಸಾವನಪ್ಪಿದ ಘಟನೆ ಸಿದ್ದಾಪುರದಲ್ಲಿ ನಡೆದಿದೆ.
ಸಿದ್ದಾಪುರ ಗ್ರಾಮದ ಐರಬೈಲು ಕೃಷಿಕ ಗಾಂಧಿ ಶೆಟ್ಟಿ (77) ಮೃತಪಟ್ಟವರು.
ತಮ್ಮ ತೋಟಕ್ಕೆ ನೀರು ಬಿಡಲು ಮನೆಯ ಹಿಂಭಾಗದಲ್ಲಿರುವ ಮೋಟಾರ್ ಶೆಡ್ ಗೆ ಹೋದಾಗ ವಿದ್ಯುತ್ ತಗಲಿಯೋ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಸಂಜೆ ಸಮಯದಲ್ಲಿ ತೋಟಕ್ಕೆ ನೀರು ಬಿಡಲು ಮೋಟಾರ್ ಶೆಡ್ ಗೆ ಹೋದವರು ಎಷ್ಟು ಹೊತ್ತಾದರೂ ಮನೆಗೆ ಬರದಿದ್ದಾಗ ಮನೆಯವರು ಹುಡುಕಾಡಿದರು. ಆಗ ಮೋಟರ್ ಶೆಡ್ ಒಳಗೆ ಬಿದ್ದಿರುವ ಗಾಂಧಿ ಶೆಟ್ಟಿ ಅವರನ್ನು ಮನೆಯವರು ಹಾಲಾಡಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಪರೀಕ್ಷಿಸಿದ ವೈದ್ಯರು, ಅವರು ಮೃತಪಟ್ಟಿರುವುದಾಗಿ ತಿಳಿಸಿದರು. ಪುತ್ರಿ ಪ್ರೀತಿ ಶೆಟ್ಟಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






