ಸಾಮಾಜಿಕ

ಮೂರು ಮಕ್ಕಳ ತಾಯಿ ಪ್ರಿಯಕರನಿಗಾಗಿ ವಿದ್ಯುತ್‌ ಕಂಬ ಏರಿ ಪತ್ನಿಯ ಹೈಡ್ರಾಮಾ! 

Views: 120

ಕನ್ನಡ ಕರಾವಳಿ ಸುದ್ದಿ: ಮಹಿಳೆಯೊಬ್ಬಳು ತನ್ನ ಪತಿಯೊಂದಿಗೆ ಜಗಳವಾಡಿ ಮನನೊಂದು ಹೈಟೆನ್ಷನ್ ವಿದ್ಯುತ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ನಡೆದಿದೆ. ಆದರೆ, ಧೈರ್ಯಶಾಲಿ ಪೊಲೀಸ್ ಕಾನ್‌ಸ್ಟೇಬಲ್‌ ತನ್ನ ಪ್ರಾಣವನ್ನು ಲೆಕ್ಕಿಸದೇ ಟವರ್‌ ಹತ್ತಿ ಮಹಿಳೆಯನ್ನು ರಕ್ಷಿಸಿದ್ದಾರೆ.

ಪತಿಯೊಂದಿಗೆ ಜಗಳವಾಡಿದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳಂತೆ. ಮಹಿಳೆಯನ್ನು ರಕ್ಷಿಸಿದ ಪೊಲೀಸ್ ಕಾನ್‌ಸ್ಟೇಬಲ್‌ ರಾಹುಲ್ ಸಿಂಗ್. ಸೋಶಿಯಲ್ ಮಿಡಿಯಾ ನೆಟ್ಟಿಗರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಕಾನ್‌ಸ್ಟೇಬಲ್‌ ಅನ್ನು ಹೊಗಳಿದ್ದಾರೆ.

ವೈರಲ್ ವಿಡಿಯೊದಲ್ಲಿ ಮಹಿಳೆ ವಿದ್ಯುತ್ ಟವರ್‌ನ ತುತ್ತ ತುದಿಗೆ ಹೋಗಿರುವುದು ಸೆರೆಯಾಗಿದೆ. ಮಹಿಳೆಯ ಜೀವ ಉಳಿಸಲು ಪೊಲೀಸ್ ಕಾನ್‌ಸ್ಟೇಬಲ್‌ ಟವರ್ ಹತ್ತಿದ್ದಾರೆ. ಮಹಿಳೆ ಮತ್ತು ಕಾನ್‌ಸ್ಟೇಬಲ್‌ ಅನ್ನು ರಕ್ಷಿಸಲು ಇತರ ಪೊಲೀಸ್ ಸಿಬ್ಬಂದಿ ಮತ್ತು ಗ್ರಾಮಸ್ಥರು ಟವರ್‌ನ ಕೆಳಗೆ ಬಲೆಯನ್ನು ಹಿಡಿದು ನಿಂತಿರುವುದು ಸೆರೆಯಾಗಿತ್ತು. ಪೊಲೀಸ್ ಅಧಿಕಾರಿಗಳು ನೀಡಿದ ಹಗ್ಗದ ಸಹಾಯದಿಂದ ಪೊಲೀಸ್ ಕಾನ್‌ಸ್ಟೇಬಲ್‌ ಮಹಿಳೆಯನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದ್ದಾನೆ.

ಪ್ರಿಯಕರನಿಗಾಗಿ ಟವರ್‌ ಏರಿದ ಮಹಿಳೆ!

ಪೊಲೀಸರ ಪ್ರಕಾರ, ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು 34 ವರ್ಷದ ಸುಮನ್ ದೇವಿ ಎಂದು ಗುರುತಿಸಲಾಗಿದ್ದು ಆಕೆ ಮೂರು ಮಕ್ಕಳ ತಾಯಿಯಾಗಿದ್ದು, ಅನೈತಿಕ ಸಂಬಂಧದಲ್ಲಿ ತೊಡಗಿದ್ದಳು ಎನ್ನಲಾಗಿದೆ. ಈಕೆ ತನ್ನ ಪತಿ 35 ವರ್ಷದ ರಾಮ್ ಗೋವಿಂದ್ ಬಳಿ ತನ್ನ ಪ್ರಿಯಕರನನ್ನು ತಮ್ಮ ಮನೆಯಲ್ಲಿ ಇಟ್ಟುಕೊಳ್ಳುವಂತೆ ಒತ್ತಾಯಿಸಿದ್ದಾಳೆ. ಆದರೆ ಆತ ಇದಕ್ಕೆ ನಿರಾಕರಿಸಿ ಆಕೆಯನ್ನು ಮನೆಯಿಂದ ಹೊರಗೆ ಹಾಕಿದ್ದಾನೆ. ಹೀಗಾಗಿ ದೇವಿ ವಿದ್ಯುತ್ ಕಂಬವನ್ನು ಹತ್ತಿ ಹೈಟೆನ್ಷನ್ ತಂತಿಯನ್ನು ಹಿಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು. ವಿಷಯ ತಿಳಿದ ಪೊಲೀಸರು ಸ್ಥಳೀಯ ವಿದ್ಯುತ್ ಇಲಾಖೆಯನ್ನು ಸಂಪರ್ಕಿಸಿ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಲು ಹೇಳಿ ಅಂತಿಮವಾಗಿ ಮಹಿಳೆಯ ಜೀವವನ್ನು ಉಳಿಸಿದರು. ಈ ಘಟನೆಯ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು.

Related Articles

Back to top button