ಜನಮನ
ಮೂಡುಗೋಪಾಡಿ ಶಾಲಾ ವಠಾರದಲ್ಲಿ ಚಿರತೆ ಸಂಚಾರ ಗ್ರಾಮಸ್ಥರಲ್ಲಿ ಹೆಚ್ಚಿಸಿದ ಆತಂಕ..!

Views: 84
ಕೋಟೇಶ್ವರ: ಇಲ್ಲಿಗೆ ಸಮೀಪ ಮೂಡುಗೋಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ಚಿರತೆ ಸಂಚಾರ ಮಾಡಿದ್ದು, ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ.
ಮೂಡುಗೋಪಾಡಿಯ ನಿವಾಸಿಯೊಬ್ಬರು ಮಸೀದಿಯಲ್ಲಿ ನಮಾಜ್ ಮುಗಿಸಿ ಹಿಂದಿರು ತ್ತಿದ್ದಾಗ ಚಿರತೆಯೊಂದು ಬೆಕ್ಕನ್ನು ಕಚ್ಚಿಕೊಂಡು ಸಮೀಪದ ಹಾಡಿಯೊಳಗೆ ಓಡುತ್ತಿರುವುದನ್ನು ಕಂಡಿರುವ ಅವರು ಭಯಭೀತರಾಗಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ.
ಜನವಸತಿ ಪ್ರದೇಶ ಮತ್ತು ಈ ವಠಾರದಲ್ಲಿ ಶಾಲಾ ವಿದ್ಯಾರ್ಥಿಗಳು ಸಹಿತ ಗ್ರಾಮಸ್ಥರು ಸಂಚರಿಸುವ ಸ್ಥಳವಾದ್ದರಿಂದ ಹೆಚ್ಚಿನ ನಿಗಾ ವಹಿಸಬೇಕೆಂದು ಕೋರಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯವರು ಭೇಟಿ ನೀಡಿ ಹೆಚ್ಚಿನ ಮಾಹಿತಿ ಸಂಗ್ರಹಿಸಿದ್ದಾರೆ.
ಇಲ್ಲಿಗೆ ಸಮೀಪ ಕೆದೂರು ಶಾನಾಡಿ ಎಂಬಲ್ಲಿ ಚಿರತೆ ಸೆರೆಹಿಡಿಯಲು ಬೋನ್ ಇಟ್ಟಿದ್ದಾರೆ.ಇಲ್ಲಿಯವರೆಗೂ ಸೆರೆಯಾಗಲಿಲ್ಲ ಕಳೆದ ಎರಡು ವರ್ಷಗಳಿಂದ ಈಚೆಗೆ ಕಟ್ಕೆರೆ, ವಕ್ವಾಡಿ,ಕೆದೂರು,ಮಾಲಾಡಿಯಲ್ಲಿ ಕಪ್ಪು ಚಿರತೆಯ ಸಂಚಾರವನ್ನು ಜನರು ನೋಡಿದ್ದಾರೆ ಎಂದು ತಿಳಿದುಬಂದಿದೆ.