ಕರಾವಳಿ
ಮಾ.13 ರಂದು ಬಾರ್ಕೂರು “ಬಟ್ಟೆ ವಿನಾಯಕ ಟವರ್ಸ್” ಲೋಕಾರ್ಪಣೆ

Views: 214
ಬ್ರಹ್ಮಾವರ: ಬಾರ್ಕೂರು ರಥಬೀದಿಯ ಹೃದಯ ಭಾಗದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ‘ಬಟ್ಟೆ ವಿನಾಯಕ ಟವರ್ಸ್‘ಇದೇ ದಿನಾಂಕ 13-3-2024ನೇ ಬುಧವಾರ ಬೆಳಗ್ಗೆ 9:30 ಕ್ಕೆ ಲೋಕಾರ್ಪಣೆಗೊಳ್ಳಲಿದೆ.
ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಶ್ರೀ ಬಿ ಅಪ್ಪಣ್ಣ ಹೆಗ್ಡೆ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಶ್ರೀ ಆನಂದ ಸಿ ಕುಂದರ್, ಬಾರ್ಕೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಶಾಂತರಾಮ ಶೆಟ್ಟಿ, ಬಾರ್ಕೂರು ಸರ್ವೋದಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರಾದ ಶ್ರೀ ನಿತ್ಯಾನಂದ ಕಾಮತ್ ಭಾಗವಹಿಸಲಿದ್ದಾರೆ ಎಂದು ಪಾಲುದಾರರಾದ ಬಾರ್ಕೂರು ರಂಗನಕೆರೆ ಶೆಟ್ಟಿಗಾರ ಇಂಡಸ್ಟ್ರೀಸ್ ಸಮೂಹ ಸಂಸ್ಥೆಯ ಮಾಲಕರಾದ ಶ್ರೀಮತಿ ಯಶೋಧ ಶ್ರೀನಿವಾಸ ಶೆಟ್ಟಿಗಾರ ಮತ್ತು ಮಕ್ಕಳು ಹಾಗೂ ಶ್ರೀಮತಿ ವಿನಯ ಶ್ರೀ ಸಂತೋಷ್ ಕುಮಾರ್ ಶೆಟ್ಟಿ ಮತ್ತು ಮಕ್ಕಳು ಸರ್ವರಿಗೂ ಆದರದ ಸ್ವಾಗತ ಕೋರಿದ್ದಾರೆ.