ಇತರೆ

ಮಹಿಳೆ ಜೊತೆಗಿನ ಖಾಸಗಿ ವಿಡಿಯೋ ಇಟ್ಟುಕೊಂಡು ಹಣಕ್ಕೆ ಬೇಡಿಕೆ: ಮಂಗಳೂರು ವ್ಯಕ್ತಿ ಬಂಧನ

Views: 0

ಕಾರವಾರ: ಬಣ್ಣದ ಮಾತಿನಿಂದ ವಿವಾಹಿತ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡು ಹಣ ಕೊಡುವಂತೆ ಬ್ಲ್ಯಾಕ್‌ಮೇಲ್ ಮಾಡಿದ ಆರೋಪಿಯನ್ನು ಕಾರವಾರದ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಆರ್ಲಪದವು ಮೂಲದ ಪ್ರಶಾಂತ್ ಭಟ್ ಮಾಣಿಲ ಬಂಧಿತ ಆರೋಪಿ. ಉತ್ತರ ಕನ್ನಡ ಜಿಲ್ಲೆಯ ವಿವಾಹಿತ ಮಹಿಳೆಯೊಬ್ಬಳು ಸಂಗೀತದಲ್ಲಿ ಆಸಕ್ತಿ ಹೊಂದಿದ್ದಳು. ಹೀಗಾಗಿ ಈಕೆ ಕ್ಲಬ್ ಹೌಸ್ ಆ್ಯಪ್‌ನಲ್ಲಿ ಹಾಡುತ್ತಿದ್ದಳು. ಈ ವೇಳೆ ಪ್ರಶಾಂತ್ ಭಟ್ ಪರಿಚಯವಾಗಿದ್ದಾನೆ. ಈ ಪರಿಚಯ ಇಬ್ಬರಲ್ಲೂ ಪ್ರೀತಿಗೆ ತಿರುಗಿದೆ.

2023ರ ಜನವರಿ ತಿಂಗಳಲ್ಲಿ ಆರೋಪಿ ಪ್ರಶಾಂತ್ ಮಹಿಳೆಯನ್ನು ಭೇಟಿಯಾಗಲು ಬಂದು ಖಾಸಗಿಯಾಗಿ ಭೇಟಿಯಾಗಿದ್ದಾರೆ.ವಿವಾಹಿತ ಮಹಿಳೆಯಿಂದ 25 ಸಾವಿರ ಹಣ ಪಡೆದಿದ್ದಾನೆ.

ಬಳಿಕ ಮಹಿಳೆಯ ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ 7 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಲ್ಲದೇ ಮಹಿಳೆಯ ತಾಯಿ ಹಾಗೂ ಸ್ನೇಹಿತರಿಗೂ ಖಾಸಗಿ ಕ್ಷಣಗಳ ಚಿತ್ರಗಳನ್ನು ಕಳುಹಿಸಿದ್ದಾನೆ.

ಪರಪುರುಷನೊಂದಿಗೆ ಮಾಡಿದ ತಪ್ಪಿನಿಂದಾಗಿ ಪಶ್ಚಾತ್ತಾಪ ಪಟ್ಟು ತಾನು ಮೋಸ ಹೋಗಿದ್ದನ್ನು ಅರಿತು ತನ್ನ ಪತಿಗೆ ಹಾಗೂ ಕುಟುಂಬಕ್ಕೆ ನಡೆದ ಘಟನೆಯನ್ನು ಮಹಿಳೆ ವಿವರಿಸಿದ್ದಾಳೆ. ನಂತರ ಆಕೆಯ ಪತಿ ಕಾರವಾರದ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದು, ಇದೀಗ ಆತನನ್ನು ಕಾರವಾರದ ಮಹಿಳಾ ಠಾಣೆ ಪೊಲೀಸರ ತಂಡ ಬಂಧಿಸಿದ್ದಾರೆ.

Related Articles

Back to top button