ಧಾರ್ಮಿಕ

ಮಹಾಕುಂಭಮೇಳದಲ್ಲಿ ಕಾಲ್ತುಳಿತ: ಬೆಳಗಾವಿಯ ತಾಯಿ – ಮಗಳು ಸಾವು 

Views: 103

 ಕನ್ನಡ ಕರಾವಳಿ ಸುದ್ದಿ:ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತ‌ ಪ್ರಕರಣದಲ್ಲಿ ‌ಬೆಳಗಾವಿಯ ತಾಯಿ – ಮಗಳು ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ. ಕಾಲ್ತುಳಿತದಲ್ಲಿ ಗಾಯಗೊಂಡ ಬಳಿಕ ಅವರನ್ನು ಇಂದು‌‌ ಬೆಳಗ್ಗೆ ಪ್ರಯಾಗ್ರಾಜ್ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ತಾಯಿ – ಮಗಳು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ಮೃತರನ್ನು ಬೆಳಗಾವಿಯ ವಡಗಾವಿ ನಿವಾಸಿ ಜ್ಯೋತಿ ಹತ್ತರವಾಟ (50), ಮೇಘಾ ಹತ್ತರವಾಟ ಎಂದು ಗುರುತಿಸಲಾಗಿದೆ. ಮೃತ ಜ್ಯೋತಿ ಸಹೋದರ ಗುರುರಾಜ್ ಹುದ್ದಾರ ಈ ಕುರಿತು ಮಾಹಿತಿ ನೀಡಿದ್ದಾರೆ.

 

 

Related Articles

Back to top button