ಮಲ್ಪೆ:ಮೆರೈನ್ ಪೋಲಿಸಿಂಗ್ ತರಬೇತಿ ಉದ್ಘಾಟನಾ ಸಮಾರಂಭ

Views: 46
ಉಡುಪಿ:ಕರಾವಳಿ ಭದ್ರತಾ ತರಬೇತಿ ಸಂಸ್ಥೆ, ಕರಾವಳಿ ಪೊಲೀಸ್ ಮಲ್ಪೆ ಇದರ 6ನೇ ತಂಡದ ಮೆರೈನ್ ಪೋಲಿಸಿಂಗ್ ತರಬೇತಿ ಉದ್ಘಾಟನಾ ಸಮಾರಂಭ ಕರಾವಳಿ ಕಾವಲು ಪೊಲೀಸ್ ಕೇಂದ್ರ ಕಚೇರಿ ಮಲ್ಪೆಯಲ್ಲಿ ನಡೆಯಿತು.
ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಶ್ರೀ ಪ್ರತೀಕ್ ಬಾಯಲ್ ಐಎಎಸ್ ಉದ್ಘಾಟಿಸಿದರು.
ಅವರು ಮಾತನಾಡುತ್ತಾ, “ಕರಾವಳಿ ಕಾವಲು ಪೊಲೀಸ್ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ತಮ್ಮ ಇಲಾಖೆ ಅನುಭವದ ಜೊತೆಗೆ ಕಾಲಕಾಲಕ್ಕೆ ಇಂತಹ ತರಬೇತಿಗಳ ಅಗತ್ಯವಿರುತ್ತದೆ. ಯೋಜಿಸಲಾಗಿರುವ ತರಬೇತಿಯಲ್ಲಿ ಅಳವಡಿಸಿರುವ ಅಂಶಗಳನ್ನು ವೃತ್ತಿ ಜೀವನದಲ್ಲಿ ಅನುಕೂಲವಾಗುವ ಉಪಯೋಗಕರ ಮಾಹಿತಿಗಳನ್ನು ಹೊಂದಿರುತ್ತದೆ. ಅಲ್ಲದೆ ಕರಾವಳಿ ಕಾವಲು ಪೊಲೀಸ್ ಘಟಕದೊಂದಿಗೆ ಸಂಬಂಧವಿರುವ ಇಂಡಿಯನ್ ನೇವಿ, ಇಂಡಿಯನ್ ರೋಸ್ ಕಾರ್ಡ್ ನೊಂದಿಗೆ ಸಮನ್ವಯತೆ ಸಾಧಿಸಲು ಅನುಕೂಲವಾಗುತ್ತದೆ” ಎಂದರು.
ಕರಾವಳಿ ಕಾವಲು ಪೊಲೀಸ್ ಘಟಕದ ಪೊಲೀಸ್ ಅಧೀಕ್ಷಕರಾದ ಶ್ರೀ ಮಿಥುನ್ ಹೆಚ್.ಎನ್, ಐಪಿಎಸ್ ಅವರು ಮಾತನಾಡಿ, ಇಂತಹ ತರಬೇತಿಗಳು ಪೊಲೀಸ್ ಸಿಬ್ಬಂದಿಗಳಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ವೃತ್ತಿ ಜೀವನದಲ್ಲಿ ಕರ್ತವ್ಯ ನಿರ್ವಹಿಸಲು ಅನುಕೂಲವಾಗುತ್ತದೆ.ಎಲ್ಲಾ ಪ್ರಶಿಕ್ಷಣಾರ್ಥಿಗಳು ತರಬೇತಿಯಲ್ಲಿ ಕಲಿತ ಅಂಶಗಳನ್ನು ಇತರ ಪೊಲೀಸ್ ಸಿಬ್ಬಂದಿ ಯವರೊಂದಿಗೆ ಹಂಚಿಕೊಳ್ಳಬೇಕು ಮತ್ತು ತರಬೇತಿಯ ವಿಷಯಗಳಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಪರಿಣಿತರಾಗಬೇಕೆಂದು ತಿಳಿಸಿದರು.
ಸಿಎಸ್ಪಿ ಕೇಂದ್ರದ ಕಚೇರಿಯ ಅಪರಾಧ ವಿಭಾಗದ ಪೊಲೀಸ್ ನಿರೀಕ್ಷಕರಾದ ಶ್ರೀ ಪ್ರಮೋದ್ ಕುಮಾರ್ ಸ್ವಾಗತಿಸಿದರು. ಎಸ್ಪಿ ಘಟಕದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಟಿ.ಎಸ್ ಸುಲ್ಪಿ ವಂದಿಸಿದರು. ಎಂಎಲ್ಇ ಕೇಂದ್ರ ಕಚೇರಿಯ ಆರ್ ಜಿ ಬಿರಾದರ ಪ್ರಸ್ತಾವನೆಗೈದರು. ಕೇಂದ್ರ ಕಚೇರಿಯ ಶಾಖಾಧೀಕ್ಷಕರಾದ ಶ್ರೀಮತಿ ಸುಮಾ ಎಸ್ ಕಾರ್ಯಕ್ರಮ ನಿರೂಪಿಸಿದರು.