ಮನೆ ಮನೆಗೆ ಭೇಟಿ ನೀಡುವ ಕಪಟ ಸ್ವಾಮೀಜಿ ವೇಷಧಾರಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ!
Views: 468
ಕನ್ನಡ ಕರಾವಳಿ ಸುದ್ದಿ: ಸ್ವಾಮೀಜಿಗಳ ವೇಷದಲ್ಲಿ ಕೆಲವರು ವಾಹನವೊಂದರಲ್ಲಿ ಮನೆ ಮನೆಗೆ ತೆರಳುತ್ತಿರುವ ಕುರಿತಂತೆ ಫೋಟೊ ಮತ್ತು ಎಚ್ಚರಿಕೆಯ ಸಂದೇಶ ನೀಡುವ ಆಡಿಯೋವೊಂದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಈ ಸ್ವಾಮೀಜಿ ವೇಷಧಾರಿಗಳು ಕಾರ್ಕಳದ ಮಿಯ್ಯಾರ್ ಪರಿಸರದಲ್ಲಿ ರಿಕ್ಷಾ ಟೆಂಪೊ ಮಾದರಿಯ ವಾಹನದಲ್ಲಿ ಪ್ರಯಾಣಿಸುತ್ತಾ ಮನೆ ಮನೆಗೆ ತೆರಳುತ್ತಿದ್ದಾರೆ.
ಮನೆಯೊಂದಕ್ಕೆ ತೆರಳಿ ಅಲ್ಲಿದ್ದ ಮಹಿಳೆಗೆ ಭಸ್ಮ ಹಾಕಿರುವುದು ಮತ್ತು ಪರಿಸರದ ಜನರು ಬಂದು ಈ ವೇಷಧಾರಿಗಳನ್ನು ಅಲ್ಲಿಂದ ಓಡಿಸಿದ್ದಾರೆ ಎಂದು ವ್ಯಕ್ತಿ ಮಾಹಿತಿ ನೀಡಿದ್ದಾರೆ. ಅಲ್ಲದೆ ಇಂತಹ ಕಪಟ ಸ್ವಾಮೀಜಿ ವೇಷಧಾರಿಗಳನ್ನು ಕಂಡರೆ ಪೊಲೀಸರಿಗೆ ಮಾಹಿತಿ ನೀಡಬೇಕೆಂಬ ಎಚ್ಚರಿಕೆಯ ಸಂದೇಶವನ್ನು ಆಡಿಯೋದಲ್ಲಿ ಉಲ್ಲೇಖಿಸಲಾಗಿದೆ
ಇವರು ಎಂಎಚ್ ರಿಜಿಸ್ಟ್ರೇಷನ್ ಹೊಂದಿರುವ ವಾಹನದಲ್ಲಿ ಆಗಮಿಸಿದ್ದು ಉತ್ತರ ಭಾರತದಿಂದ ಬಂದ ಕಪಟರಾಗಿದ್ದು, ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡುವ ಇಂತಹ ಸ್ವಾಮೀಜಿಗಳ ಬಗ್ಗೆ ಜನತೆ ಎಚ್ಚರಿಕೆಯಿಂದ ಇರಬೇಕು ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ.








