ಇತರೆ

ಮನೆಯ ತೋಟದಲ್ಲಿ ನವಜಾತ ಹೆಣ್ಣು ಶಿಶುವಿನ ಮೃತದೇಹ ಪತ್ತೆ

Views: 106

ಕನ್ನಡ ಕರಾವಳಿ ಸುದ್ದಿ, ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಅಂಬಡಗಟ್ಟಿ ಗ್ರಾಮದ ಮರಿಯಮ್ಮನ ಗುಡಿ ಓಣಿಯ ಬಳಿ ನವಜಾತ ಹೆಣ್ಣು ಹಸುಗೂಸು ಪತ್ತೆಯಾಗಿದೆ.

ಅಂಬಡಗಟ್ಟಿ ಗ್ರಾಮದ ಮೇಟಿ ಅವರ ಮನೆಯ ತೋಟದಲ್ಲಿ ನವಜಾತ ಹೆಣ್ಣು ಹಸುಗೂಸು ಪತ್ತೆಯಾಗಿದೆ. ನಾಯಿ, ಹಂದಿ ದಾಳಿಗೆ ಕೂಸು ಬಲಿಯಾಗಿದೆ. ಘಟನಾ ಸ್ಥಳಕ್ಕೆ ಕಿತ್ತೂರು ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸ್‌ಐ ಪ್ರವೀಣ ಕೋಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!