ಯುವಜನ

ಮದುವೆ ಮಂಟಪದಿಂದ ಓಡಿ ಬಂದ ಯುವತಿ ರೈಲ್ವೆ ನಿಲ್ದಾಣದ ಬಳಿ ಬಂದು ಹಾರ ಬದಲಾಯಿಸಿಕೊಂಡು ಮದುವೆ!

Views: 183

ಕನ್ನಡ ಕರಾವಳಿ ಸುದ್ದಿ: ಮದುವೆಯ ಸಿದ್ಧತೆಗಳು ಭರದಿಂದ ಸಾಗುತ್ತಿದ್ದ ವೇಳೆ, ಆಕೆಯ ಪ್ರೇಮಿ ಕೂಡ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದನು. ಆದರೆ, ಜನರ ನಡುವೆ ಆತನನ್ನು ಗಮನಿಸಲು ವಧುವಿಗೆ ಸಾಧ್ಯವಾಗಿರಲಿಲ್ಲ. ನಂತರ ಆತ ಬೇಸರದಿಂದ ರೈಲ್ವೆ ನಿಲ್ದಾಣಕ್ಕೆ ತೆರಳಿದ್ದಾನೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ, ಯುವತಿ ಮದುವೆ ಉಡುಪಿನಲ್ಲೇ ಮಂಟಪದಿಂದ ನೇರವಾಗಿ ರೈಲ್ವೆ ನಿಲ್ದಾಣಕ್ಕೆ ಓಡಿಬಂದಿದ್ದಾಳೆ.

ರೈಲ್ವೆ ನಿಲ್ದಾಣದಲ್ಲಿ ಪ್ರೇಮಿಯನ್ನು ಭೇಟಿಯಾದ ಯುವತಿ, ಆತನ ಜೊತೆಯೇ ಹೋಗುವುದಾಗಿ ಪಟ್ಟು ಹಿಡಿದಿದ್ದಾಳೆ. ಕುಟುಂಬದ ಪರಿಸ್ಥಿತಿಯನ್ನು ವಿವರಿಸಿ ಯುವಕ ಆಕೆಯನ್ನು ಸಮಾಧಾನಪಡಿಸಲು ಎಷ್ಟೇ ಪ್ರಯತ್ನಿಸಿದರೂ, ಯುವತಿ ಆತನ ಕಾಲಿಗೆ ಬಿದ್ದು ಕಣ್ಣೀರಿಟ್ಟಿದ್ದಾಳೆ. “ನಾನು ಪ್ರೀತಿಸಿದ್ದು ನಿನ್ನನ್ನೇ, ಮದುವೆಯಾದರೆ ನಿನ್ನನ್ನೇ ಆಗುವುದು” ಎಂದು ಹಠ ಹಿಡಿದಿದ್ದಾಳೆ. ಅಂತಿಮವಾಗಿ ಇಬ್ಬರೂ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲೇ ಒಬ್ಬರಿಗೊಬ್ಬರು ಹಾರ ಬದಲಾಯಿಸಿಕೊಂಡು ಮದುವೆಯಾಗಿದ್ದಾರೆ.

ಮದುವೆ ಮಂಟಪ ಬಿಟ್ಟು ರೈಲ್ವೆ ನಿಲ್ದಾಣದಲ್ಲಿ ನಡೆದ ಈ ಹೈಡ್ರಾಮಾ ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದ್ದು, ಇದು ನಿಜವಾದ ಪ್ರೀತಿಯೇ ಅಥವಾ ಅವಸರದ ನಿರ್ಧಾರವೇ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿದೆ.

Related Articles

Back to top button
error: Content is protected !!